ಡಿಕೆ ಬ್ರದರ್ಸ್ ಟಕ್ಕರ್, ಮುಸ್ಲಿಂ ಮಹಿಳೆ ರೋಷಾವೇಶ; ಸಿದ್ದು ಸಿಎಂ “ಕಂಬಳಿ” ಭವಿಷ್ಯ..!

2023 ರ ಚುನಾವಣೆಗೆ ಭರ್ತಿ 9 ತಿಂಗಳು ಬಾಕಿಯಿದೆ. ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಹೆಸರು ಸಿಎಂ ರೇಸ್‌ನಲ್ಲಿ ಕೇಳಿ ಬರುತ್ತಿದೆ. 

Share this Video
  • FB
  • Linkdin
  • Whatsapp

2023 ರ ಚುನಾವಣೆಗೆ ಭರ್ತಿ 9 ತಿಂಗಳು ಬಾಕಿಯಿದೆ. ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಹೆಸರು ಸಿಎಂ ರೇಸ್‌ನಲ್ಲಿ ಕೇಳಿ ಬರುತ್ತಿದೆ. ತೆರೆಮರೆಯಲ್ಲಿ ತಯಾರಿ ಕೂಡಾ ಶುರುವಾಗಿದೆ.

ಬೆಂಗಳೂರಿನ ಇಬ್ಬರು ಸಚಿವರಿಗೆ ಗದರಿದ ಬಿಎಲ್ ಸಂತೋಷ್: ಫುಲ್ ಕ್ಲಾಸ್

ಆಗಸ್ಟ್ 3 ಕ್ಕೆ ದಾವಣಗರೆಯಲ್ಲಿ ಸಿದ್ದರಾಮೋತ್ಸವ ಹಮ್ಮಿಕೊಳ್ಳಲಾಗಿದೆ, ಇದೂ ಕೂಡಾ ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ಭಾಗ. ಇನ್ನೊಂದು ಕಡೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರಾ ಎಂದು ಯಾದಗಿರಿಯ ಮಾಲಹಳ್ಳಿ ಮಾಳಿಂಗರಾಯ ದೇಗುಲದ ಅರ್ಚಕ ಕೆಂಚಪ್ಪ ಪೂಜಾರಿ ಕಂಬಳಿ ಭವಿಷ್ಯ ನುಡಿದಿದ್ದಾರೆ.

ಹಳೇ ಮೈಸೂರಿನಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಪ್ಲ್ಯಾನ್, ಶಾಸಕರಿಗೆ 1+1 ಟಾಸ್ಕ್

ಇನ್ನೊಂದು ಕಡೆ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಪತ್ನಿ ಜೊತೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಚಾಮುಂಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟಕ್ಕೆ ಅವರು ನಗರ ಸಾರಿಗೆ ಬಸ್‌ನಲ್ಲೇ ಪ್ರಯಾಣಿಕರ ಜತೆ ತೆರಳಿದ್ದು ವಿಶೇಷವಾಗಿತ್ತು. ಈ ವೇಳೆ ಅವರ ಅಭಿಮಾನಿಗಳು ‘ಮುಂದಿನ ಸಿಎಂ ಡಿಕೆಶಿ’ ಎಂದು ಘೋಷಣೆ ಕೂಗಿದರು. ಒಂದು ಕಡೆ ಸಿದ್ದು ಸಿಎಂ, ಇನ್ನೊಂದೆಡೆ ಡಿಕೆಶಿ ಸಿಎಂ ಎಂಬ ಕೂಗು ಕೇಳಿ ಬರುತ್ತಿದೆ. ಹಾಗಾದರೆ ಕಾಂಗ್ರೆಸ್‌ಲ್ಲಿ ಭಿನ್ನಾಭಿಪ್ರಾ ಇದೆಯಾ..? 

Related Video