ಹಳೇ ಮೈಸೂರಿನಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಪ್ಲಾನ್, ಶಾಸಕರಿಗೆ 1+1 ಟಾಸ್ಕ್

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್‌ 150’ ಕಾರ್ಯಗತಗೊಳಿಸುವ ಉದ್ದೇಶದಿಂದ ಪಕ್ಷ ಸಂಘಟನೆ ದುರ್ಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ತಂತ್ರ ರೂಪಿಸಿರುವ ಆಡಳಿತಾರೂಢ ಬಿಜೆಪಿ, ಆ ಭಾಗದ ಶಾಸಕರಿಗೆ ‘1+1’ ಸೂತ್ರದ ಗುರಿ ನೀಡಿದೆ.

Suvarna News  | Published: Jul 16, 2022, 12:18 PM IST

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಮಿಷನ್‌ 150’  (Mission 150) ಕಾರ್ಯಗತಗೊಳಿಸುವ ಉದ್ದೇಶದಿಂದ ಪಕ್ಷ ಸಂಘಟನೆ ದುರ್ಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ತಂತ್ರ ರೂಪಿಸಿರುವ ಆಡಳಿತಾರೂಢ ಬಿಜೆಪಿ, ಆ ಭಾಗದ ಶಾಸಕರಿಗೆ ‘1+1’ ಸೂತ್ರದ ಗುರಿ ನೀಡಿದೆ.

ಫೋಟೋ-ಚಿತ್ರೀಕರಣ ನಿಷೇಧ: U ಟರ್ನ್ ಹೊಡೆದ ಸರ್ಕಾರ, ಆದೇಶ ವಾಪಾಸ್

ಈ ‘1+1’ ಸೂತ್ರದ ಅನುಸಾರ ಹಳೆ ಮೈಸೂರು ಭಾಗದ ಹಾಲಿ ಶಾಸಕರು ತಾವು ಗೆಲ್ಲುವುದರ ಜತೆಗೆ ಮತ್ತೊಂದು ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಿಕೊಡುವ ಹೊಣೆ ಹೊರಬೇಕು. ತಾವು ಗೆಲ್ಲಿಸಿಕೊಡುವ ಕ್ಷೇತ್ರ ಯಾವುದು ಎಂಬುದರ ಹೆಸರನ್ನು ಶೀಘ್ರದಲ್ಲೇ ಪಕ್ಷದ ವರಿಷ್ಠರಿಗೆ ನೀಡಬೇಕು. ಜತೆಗೆ ತಕ್ಷಣದಿಂದಲೇ ಆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಕೆಲಸ ಆರಂಭಿಸಬೇಕು. ಇದಕ್ಕೆ ಅಗತ್ಯವಾದ ಸಹಕಾರವನ್ನು ಪಕ್ಷದ ವತಿಯಿಂದ ನೀಡಲಾಗುವುದು ಎಂದು ಸೂಚಿಸಲಾಗಿದೆ.

Read More...