Asianet Suvarna News Asianet Suvarna News

News Hour: ಗ್ಯಾರಂಟಿ ಕ್ಯಾಬಿನೆಟ್‌ಗೆ ಸಜ್ಜಾದ ಸರ್ಕಾರ, ಜಟಾಪಟಿಗೆ ರೆಡಿಯಾದ ವಿಪಕ್ಷ!

ಚುನಾವಣೆಗೂ ಮುನ್ನ ಭರ್ಜರಿಯಾಗಿ ಘೋಷಣೆಯಾಗಿದ್ದ ಗ್ಯಾರಂಟಿ ಇನ್ನೂ ಜಾರಿಯಾಗಿಲ್ಲ. ಅದರ ಮಹತ್ವದ ಕ್ಯಾಬಿನೆಟ್‌ ಸಭೆ ನಾಳೆ ನಿಗದಿಯಾಗಿದೆ. ಇನ್ನೊಂದೆಡೆ ಬಿಜೆಪಿ ಕೂಡ ಕ್ಯಾಬಿನೆಟ್‌ ಘೋಷಣೆಯ ಬಗ್ಗೆ ಕುತೂಹಲ ಹೊಂದಿದೆ.

ಬೆಂಗಳೂರು (ಜೂ.1): ಚುನಾವಣೆ ಫಲಿತಾಂಶ ಬಂದು ಕಾಂಗ್ರೆಸ್‌ಗೆ ಬಹುಮತ ಬಂದ ಬೆನ್ನಲ್ಲಿಯೇ ಜನರು ಕೇಳಿದ್ದು ಒಂದೇ ಪ್ರಶ್ನೆ ಗ್ಯಾರಂಟಿ ಯಾವಾಗ ಎನ್ನುವುದು. ಆದರೆ, ಇಲ್ಲಿಯವರೆಗೂ ಅದೂ, ಇದೂ ಅಂದುಕೊಳ್ಳುತ್ತಲೇ ಬಂದ ಸರ್ಕಾರ, ನಾಳೆ ಗ್ಯಾರಂಟಿ ಕುರಿತಾಗಿ ಘೋಷಣೆ ಮಾಡುವ ಕ್ಯಾಬಿನೆಟ್‌ ಸಭೆ ಕರೆದಿದೆ. ಬೇಷರತ್‌ ಆಗಿ ಗ್ಯಾರಂಟಿ ಜಾರಿ ಮಾಡುತ್ತಾ? ಇಲ್ವಾ? ಅನ್ನೋದೇ ಮುಂದಿರುವ ಪ್ರಶ್ನೆಯಾಗಿದೆ.

ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಗ್ಯಾರಂಟಿಯನ್ನು ಜಾರಿ ಮಾಡುವ ಒತ್ತಡಕ್ಕೆ ರಾಜ್ಯ ಸರ್ಕಾರ ಸಿಲುಕಿದೆ. ಚುನಾವಣೆಗೂ ಮುನ್ನ ಎಲ್ಲರಿಗೂ ಫ್ರೀ ಎಂದಿದ್ದ ಕಾಂಗ್ರೆಸ್‌ ಈಗ ಷರತ್ತಿನ ಮಾತನ್ನಾಡುತ್ತಿದೆ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಇಲ್ಲದೇ ಇದ್ದಲ್ಲಿ ಪ್ರತಿಭಟನೆ ಎದುರಿಸಿ ಎಂದು ಬಿಜೆಪಿ ಹೇಳಿದೆ.

News Hour: ರಾಜ್ಯದಲ್ಲಿ ಜನರಿಂದ ಗ್ಯಾರಂಟಿ ಗುದ್ದಾಟ, ಸರ್ಕಾರದಿಂದ ಕ್ಯಾಬಿನೆಟ್‌ ಕಾದಾಟ!

ಒಂದೆಡೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ಪ್ರಧಾನಿ ಮೋದಿ ರಾಜಸ್ಥಾನದ ಸಮಾವೇಶದಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳಿಂದ ದೇಶ ದಿವಾಳಿಯಾಗಲಿದೆ. ದೇಶಕ್ಕಾಗಿ ಕಾಂಗ್ರೆಸ್‌ ಬಳಿ ಒಳ್ಳೆಯ ಕಲ್ಪನೆಗಳೇ ಇಲ್ಲ ಎಂದು ಟೀಕಿಸಿದ್ದಾರೆ.