News Hour: ರಾಜ್ಯದಲ್ಲಿ ಜನರಿಂದ ಗ್ಯಾರಂಟಿ ಗುದ್ದಾಟ, ಸರ್ಕಾರದಿಂದ ಕ್ಯಾಬಿನೆಟ್‌ ಕಾದಾಟ!

ಒಂದೆಡೆ ಇಡೀ ರಾಜ್ಯ ಸರ್ಕಾರ ನವದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಂಪುಟ ವಿಸ್ತರಣೆಯ ಸರ್ಕಸ್‌ನಲ್ಲಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಜನರಿಂದ ಗ್ಯಾರಂಟಿ ಗುದ್ದಾಟ ನಡೆದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಕೂಡ 'ಗ್ಯಾರಂಟಿ' ಹೋರಾಟಕ್ಕಿಳಿಯಲು ಅಣಿಯಾಗಿದೆ.
 

First Published May 25, 2023, 11:37 PM IST | Last Updated May 25, 2023, 11:37 PM IST

ಬೆಂಗಳೂರು (ಮೇ.25): ರಾಜ್ಯದಲ್ಲಿ ಗ್ಯಾರಂಟಿ ಗುದ್ದಾಟ ಜೋರಾಗಿದೆ. ಐದು ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರ ಹಿಡಿದ ಕಾಂಗ್ರೆಸ್‌ ಇನ್ನೂ ಅದನ್ನು ಜಾರಿ ಮಾಡಿಲ್ಲ. ಆದರೆ, ಜನ ಮಾತ್ರ ತಾವು ಕರೆಂಟ್‌ ಬಿಲ್‌ ಕಟ್ಟಲ್ಲ,ಬಸ್‌ ಟಿಕೆಟ್‌ ತೆಗೆದುಕೊಳ್ಳೋದಿಲ್ಲ ಎಂದು ವಾದಕ್ಕೆ ಇಳಿದಿದ್ದಾರೆ. ಇದನ್ನು ಬಿಜೆಪಿ ಹಾಗೂ ಜೆಡಿಎಸ್‌ ಅಸ್ತ್ರವಾಗಿ ಬಳಸಿಕೊಳ್ಳಲು ಸಜ್ಜಾಗಿದೆ.

ಇನ್ನೊಂದೆಡೆ ಗ್ಯಾರಂಟಿ ಬಗ್ಗೆ ನಿರ್ಧಾರ ಮಾಡಬೇಕಿದ್ದ ಇಡೀ ಸರ್ಕಾರ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಸಂಪುಟ ವಿಸ್ತರಣೆ ಮಾಡುವ ಸಲುವಾಗಿ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎನ್ನುವ ಕುರಿತಾಗಿ ದೆಹಲಿಯಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ ಶನಿವಾರ ಸಚಿವರ ಪದಗ್ರಹಣ ಸಮಾರಂಭ ನಡೆಯುವ ಸಾಧ್ಯತೆ ಇದೆ.

Karnataka cabinet Expansion: ಕಾಂಗ್ರೆಸ್‌ನ 18 ಹೊಸ ಸಚಿವರ ಪಟ್ಟಿ ಲಭ್ಯ: ಲಿಂಗಾಯತರ ಕೈ ಹಿಡಿದ ಹೈಕಮಾಂಡ್

ಆರಂಭದಲ್ಲಿ 20 ಶಾಸಕರನ್ನು ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದರೂ, ಕೊನೆಗೆ ಈ ಸಂಖ್ಯೆ 24ಕ್ಕೆ ಏರಿದೆ. ಈ ಕುರಿತಾಗಿ ರಾಜ್ಯಪಾಲರಿಗೂ ಮಾಹಿತಿ ನೀಡಲಾಗಿದ್ದು, ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಈ ಕುರಿತಾಗಿ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.