ಕಾಂಗ್ರೆಸ್ ಸರ್ಕಾರ ಹತ್ತಿ ಹಣ್ಣು ಇದ್ದಂತೆ; ಹೊರಗೆಲ್ಲಾ ಬೆಳಕು, ಒಳಗೆಲ್ಲಾ ಹುಳುಕು?
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನುದಾನದ ಕೊರತೆ ಮತ್ತು ಮುಖ್ಯಮಂತ್ರಿಗಳ ನಿರ್ಲಕ್ಷ್ಯದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಅನುದಾನ ಕೇಳಿದ ಶಾಸಕರಿಗೆ ಗಪ್‌ಚುಪ್ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆಯಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು (ಡಿ.19): ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಕೆಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನ್ನೋ ಸುದ್ದಿ ಇದೆ.. ಅಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರು, ನಮ್ಮ ಮಾತಿಗೆ ಕಿಮ್ಮತ್ತಿಲ್ವಾ? ಶಾಸಕರ ಸಮಸ್ಯೆ ಏನು? ನೋವು ಏನು ಅಂತ ಮುಖ್ಯಮಂತ್ರಿಗಳು ಕೇಳಿಸಿಕೊಳ್ತಾ ಇಲ್ಲ.. ಶಾಸಕರ ದುಃಖ ದುಮ್ಮಾನ ಏನು ಅಂತ ಉಪಮುಖ್ಯಮಂತ್ರಿಗಳು ಗಮನಿಸ್ತಾ ಇಲ್ಲ, ಅಂತ ಹಲವರು ಅಸಮಾಧಾನ ಹೊರ ಹಾಕಿದ್ದಾರೆ.
ಅನುದಾನದ ಬಗ್ಗೆ ಚರ್ಚಿಸೋಕೆ ಬಂದಿದ್ದ ಶಾಸಕರಿಗೆ ಭಾರೀ ನಿರಾಸೆಯಾಗಿದೆ.. ಯಾಕಂದ್ರೆ, ಅನುದಾನ ಕೇಳಿದ ಶಾಸರಿಗೆ ಗಪ್‌ಚುಪ್ ಅಂತ ಹೇಳಿದ್ರಂತೆ ಸಿಎಂ.. ಅಷ್ಟೇ ಅಲ್ಲ, ಭಾಷಣ ಮಾಡಿ ಶಾಸಕಾಂಗ ಸಭೆ ಅಂತ್ಯ ಹಾಡಿದ ಸಿಎಂ, ಡಿಸಿಎಂ ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದಾರೆ.. ಬಿಜೆಪಿಗೆ ವಕ್ಫ್, ಪಂಚಮಸಾಲಿ, ಅನುದಾನ ವಿಚಾರ ಬಿಟ್ರೆ, ಅಧಿವೇಶನದಲ್ಲಿ ಬಿಜೆಪಿಗೆ ಯಾವುದೇ ವಿಚಾರವಿಲ್ಲ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಅಷ್ಟೇ ಅಲ್ಲ, ಸರ್ಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ದುಡ್ಡಿಲ್ಲ ಅಂತ ಹೇಳಬೇಡಿ, ನಮ್ಮ ಹತ್ರ ದುಡ್ಡಿದೆ.. ಬಿಜೆಪಿಯವರು ಸುಮ್ಮನೆ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ, ಅಂತ ಹೇಳಿದಾರೆ.. ಅಷ್ಟೇ ಅಲ್ಲ, ದುಡ್ಡಿಲ್ಲದಿದ್ರೆ ರೋಣದಲ್ಲಿ ₹200 ಕೋಟಿ ಕೆಲಸ ಆಗ್ತಿತ್ತಾ, ಅಂತ ಮರುಪ್ರಶ್ನೆ ಮಾಡಿದಾರೆ.. ಬಿಜೆಪಿ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿ ಸಮಾಧಾನ ಮಾಡಿದ್ದಾರೆ.
ಆದರೆ, ಅದೇ ಸಭೆಯಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಏರುದನಿಯಲ್ಲಿ ಅನುದಾನ ಕೇಳಿದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಆಮೇಲೆ ಮಾತಾಡ್ತೀನಿ ಅಂತ ಹೇಳಿದಾರೆ. ಅದೇ ಹೊತ್ತಿಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ಅನುದಾನಕ್ಕೆ ಬೇಡಿಕೆ ಇಟ್ಟಿದಾರೆ. ಆದ್ರೆ ಸಿದ್ದರಾಮಯ್ಯ ಅವರು ಎಲ್ಲರಿಗೂ ಅನುದಾನ ಸಿಗುತ್ತದೆ. ಎಲ್ಲವೂ ಸರಿ ಹೋಗುತ್ತೆ ಅಂತ ಭರವಸೆ ಕೊಟ್ಟಿದಾರೆ. ಇದರ ಬೆನ್ನಲ್ಲೇ, ಸಮಾಜ ಕಲ್ಯಾಣ ಇಲಾಖೆಯಲ್ಲಿ 30 ಸಾವಿರ ಕೋಟಿ ರೂ. ಇದೆ ಅಂತ ಸಚಿವ ಮಹದೇವಪ್ಪ ಹೇಳಿದಾರೆ. ಅದೇ ಹೊತ್ತಿಗೆ, ಆ ದುಡ್ಡು ಸ್ವಿಸ್ ಬ್ಯಾಂಕ್‌ನಲ್ಲಿರಬೇಕು ಅಂತ ಮತ್ತೊಬ್ಬ ಸಚಿವರು ಯಾರೋ ಕಿಚಾಯಿಸಿದ್ದಾರಂತೆ. ಇದಿಷ್ಟೂ ಶಾಸಕಾಂಗ ಪಕ್ಷದ ಸಭೆಯ-ಒಳಗೆ ನಡೆದಿರೋದು.. ಆದ್ರೆ ಹೊರಗೆ ಕಾಣುಸ್ತಾ ಇರೋದು ಬೇರೆ..