ಬಿಎಸ್‌ವೈಗೆ ಕಾಂಗ್ರೆಸ್ ನಾಯಕರ ಬಲ, ಎಚ್ಚರಿಕೆಯಿಂದ ಹೆಜ್ಜೆ ಇಡಲು ಬಿಜೆಪಿ ಚಿಂತನೆ!
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ನಡೆಯುತ್ತಿದೆ. ಜುಲೈ 26ಕ್ಕೆಡ ಫೈನಲ್ ಅಲ್ಲ, ಆಗಸ್ಟ್ 6ಕ್ಕೆ ಅಂತಿಮ ನಿರ್ಧಾರ ಪ್ರಕಟವಾಗೋದು ಪಕ್ಕಾ ಎನ್ನಲಾಗುತ್ತಿದೆ.
ಬೆಂಗಳೂರು(ಜು.20): ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ನಡೆಯುತ್ತಿದೆ. ಜುಲೈ 26ಕ್ಕೆಡ ಫೈನಲ್ ಅಲ್ಲ, ಆಗಸ್ಟ್ 6ಕ್ಕೆ ಅಂತಿಮ ನಿರ್ಧಾರ ಪ್ರಕಟವಾಗೋದು ಪಕ್ಕಾ ಎನ್ನಲಾಗುತ್ತಿದೆ.
ಬದಲಾವಣೆ ಬಗ್ಗೆ ಕಳೆದ ಎರಡು ದಿನಗಳಿಂದ ತೀವ್ರ ವದಂತಿಗಳು ಕೇಳಿಬರುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈ ನಡುವೆ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಮಠಾಧೀಶರು ಬಹಿರಂಗವಾಗಿ ಯಡಿಯೂರಪ್ಪ ಅವರ ಬೆನ್ನಿಗೆ ನಿಲ್ಲುತ್ತಿದ್ದಾರೆ.
ಜು.26 ಕೇಸರಿ ಮನೆಯಲ್ಲಿ ಕಂಪನ : ಬಿಜೆಪಿ ನಾಯಕರಿಗೆ ಲಿಂಗಾಯತರ ಎಚ್ಚರಿಕೆ !
ಹೀಗಾಗಿ, ಈ ಬಿಕ್ಕಟ್ಟನ್ನು ಯಾವುದೇ ರೀತಿಯಲ್ಲಿ ಪಕ್ಷಕ್ಕೆ ಧಕ್ಕೆಯಾಗದಂತೆ ಮುಗಿಸಲು ಪಕ್ಷದ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.