25 ಕ್ಷೇತ್ರಗಳಲ್ಲಿ ನಮಗೆ ಟಿಕೆಟ್‌ ನೀಡಿ: ಬ್ರಾಹ್ಮಣ ಮಹಾಸಭಾ ಆಗ್ರಹ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ವೇದಿಕೆ ಸಿದ್ಧವಾಗಿದ್ದು, 25 ಕ್ಷೇತ್ರಗಳಲ್ಲಿ ಟಿಕೆಟ್‌ ನೀಡುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.

Share this Video
  • FB
  • Linkdin
  • Whatsapp

ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರ 'ಬ್ರಾಹ್ಮಣ ಸಿಎಂ' ಹೇಳಿಕೆ ಬೆನ್ನಲ್ಲೇ, ಹೆಚ್ಚಿನ ಟಿಕೆಟ್‌ಗಾಗಿ ಬ್ರಾಹ್ಮಣ ಸಮುದಾಯ ಆಗ್ರಹಿಸಿದೆ. ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಟಿಕೆಟ್‌ ನೀಡಲು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯ ಮಾಡಿದೆ. ಬೆಂಗಳೂರು ಸೇರಿದಂತೆ 25 ಕ್ಷೇತ್ರಗಳ ಮೇಲೆ ಬ್ರಾಹ್ಮಣ ಮಹಾಸಭಾ ಕಣ್ಣಿಟ್ಟಿದ್ದು, ಹೆಚ್ಚಿನ ಸದಸ್ಯ ಬಲಕ್ಕಾಗಿ ಈ ತಂತ್ರಕ್ಕೆ ಬ್ರಾಹ್ಮಣರು ಮುಂದಾಗಿದ್ದಾರೆ. ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್‌ ನೀಡುವಂತೆ ಎಲ್ಲಾ ಪಕ್ಷಗಳಿಗೂ ಆಗ್ರಹ ಮಾಡಲಾಗಿದೆ.

Related Video