ಬಾವಿಗಿಳಿದು ಚಿರತೆಯನ್ನು ರಕ್ಷಿಸಿದ ಗಟ್ಟಿಗಿತ್ತಿ: ವೈದ್ಯೆಯ ಸಾಧನೆಗೆ ಎಲ್ಲರ ಮೆಚ್ಚುಗೆ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಆಳವಾದ ಬಾವಿಗೆ 1 ವರ್ಷದ ಪ್ರಾಯದ ಚಿರತೆ ಬಿದ್ದಿದ್ದು, ಇದೀಗ ರಕ್ಷಣೆ ಮಾಡಲಾಗಿದೆ.
ಮಂಗಳೂರು ಸಮೀಪ ಆಳವಾದ ಬಾವಿಗೆ ಬಿದ್ದ ಚಿರತೆಯನ್ನು, ಡಾ. ಮೇಘನಾ ಎಂಬುವವರು ರಕ್ಷಣೆ ಮಾಡಿದ್ದಾರೆ. 20 ಗಂಟೆಗಳ ಕಾರ್ಯಾಚರಣೆ ನಂತರವೂ ಚಿರತೆ ರಕ್ಷಿಸುವಲ್ಲಿ ವಿಫಲವಾಗಿದ್ದು, ಆದರೆ ಯಾವುದೇ ಅಂಜಿಕೆಯಿಲ್ಲದೆ ಬೋನ್ ಒಳಗೆ ಡಾ. ಮೇಘನಾ ಬಾವಿಗೆ ಇಳಿದಿದ್ದಾರೆ. ನಂತರ ಅರವಳಿಕೆ ಇಂಜೆಕ್ಷನ್ ನೀಡಿ ಚಿರತೆಯನ್ನು ಪ್ರಜ್ಞೆ ತಪ್ಪಿಸಿ ಸೇಫಾಗಿ ಚಿರತೆ ಜೊತೆ ಮೇಲೆ ಬಂದಿದ್ದಾರೆ. ಇವರ ಸಾಧನೆಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 1 ವರ್ಷದ ಪ್ರಾಯದ ಚಿರತೆ ಬಾವಿಯೊಳಗೆ ಬಿದ್ದಿದ್ದು, ಅರಣ್ಯ ಇಲಾಖೆ ಮೇಲೆತ್ತಲು ವಿಫಲವಾಗಿತ್ತು.