Asianet Suvarna News Asianet Suvarna News

ನಾಯಕತ್ವ ಬದಲಾವಣೆಯ ಕೂಗು: ಇಂದು ಕೆಲ ಶಾಸಕರ ಜೊತೆ ಅರುಣ್‌ ಸಿಂಗ್‌ ಸಭೆ?

Jun 18, 2021, 9:18 AM IST

ಬೆಂಗಳೂರು(ಜೂ.18):  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದ್ದು, ನಿನ್ನೆ(ಗುರುವಾರ) ಏಳು ಸಚಿವರು, 50 ಕ್ಕೂ ಹೆಚ್ಚಿನ ಶಾಸಕರ ಜೊತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸಭೆ ನಡೆಸಿದ್ದಾರೆ. ಪ್ರತಿಯೊಬ್ಬರ ಬಳಿ ಪ್ರತ್ಯೇಕವಾಗಿ ಮಾತನಾಡಿ ಎಲ್ಲರ ಅಭಿಪ್ರಾಯವನ್ನ ಪಡೆದುಕೊಂಡಿದ್ದಾರೆ. ನಿನ್ನೆ ಸಿಂಗ್‌ ಅವರನ್ನ ಭೇಟಿಗೆ ಅವಕಾಶ ಸಿಗದ ಶಾಸಕರಿಗೆ ಇಂದು ಅವಕಾಶ ಸಿಗಲಿದೆಯಾ? ಎಂಬುದನ್ನು ಕಾದುನೋಡಬೇಕಿದೆ.  ಸಿಂಗ್‌ ಬಳಿ ಅಹವಾಲು ಹೇಳಿಕೊಳ್ಳಲು ಕೆಲ ಶಾಸಕರು ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಬೆಲ್ಲದ್ ಪೋನ್‌ ಟ್ಯಾಪ್ ಆರೋಪದ ಹಿಂದಿನ ಕತೆ ಹೇಳಿದ ರೇಣುಕಾಚಾರ್ಯ