Asianet Suvarna News Asianet Suvarna News

Karnataka Assembly Elections: ಬಾಗಲಕೋಟೆಯ ಎಲೆಕ್ಶನ್‌ ಗ್ರೌಂಡ್‌ ರಿಪೋರ್ಟ್‌

ರಾಜ್ಯ ರಾಜಕೀಯದ ಕಾವು ನಿಧಾನಕ್ಕೆ ಏರುತ್ತಿದೆ. ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿ. ಹಾಗಾಗಿ ಜಿಲ್ಲೆಗಳಲ್ಲಿ ಯಾವ ರೀತಿಯ ಪರಿಸ್ಥಿತಿ, ಜಿಲ್ಲೆಗಳಲ್ಲಿ ಟಿಕೆಟ್‌ ಫೈಟ್‌ ಹೇಗಿದೆ ಎನ್ನುವುದರ ಗ್ರೌಂಡ್‌ ರಿಪೋರ್ಟ್‌. 

ಬಾಗಲಕೋಟೆ (ನ.24): ರಾಜ್ಯದಲ್ಲಿ ಚುನಾವಣೆ ದಿನಾಂಕ ನಿಶ್ಚಯವಾಗದೇ ಇದ್ದರೂ ಎಲ್ಲಾ ಜಿಲ್ಲೆಗಳಲ್ಲಿ ಚುನಾವಣೆಯ ಸಿದ್ದತೆ ಹಾಗೂ ಟಿಕೆಟ್‌ ಫೈಟ್‌ ಜೋರಾಗಿ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪಕ್ಷಗಳಲ್ಲಿ ಟಿಕೆಟ್‌ ಫೈಟ್‌ ಹೇಗಿದೆ ಅನ್ನೋದರ ರಿಪೋರ್ಟ್‌ ಇಲ್ಲಿದೆ.

ಐದು ದಶಕಗಳ ಕಾಲ ಕಾಂಗ್ರೆಸ್‌ನ ಬಿಗಿ ಹಿಡಿತದಲ್ಲಿದ್ದ ಬಾಗಲಕೋಟೆಯ ರಾಜಕೀಯ ಈಗ ಬದಲಾಗಿದೆ. ಕಳೆದ ಬಾರಿ ಸಿದ್ಧರಾಮಯ್ಯ ಸ್ಪರ್ಧೆಯಿಂದ ಬದಲಾಗಿದ್ದ ಜಿಲ್ಲೆಯ ರಾಜಕಾರಣದಲ್ಲಿ, ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಪಂಚಮಸಾಲಿ ಹೋರಾಟ ಈ ಬಾರಿಯ ಪ್ರಮುಖ ವಿಚಾರವಾಗಿದೆ.

Karnataka Assembly Elections: ಗೆಲ್ಲುವ ವಿಶ್ವಾಸವಿಲ್ಲದ್ದಕ್ಕೆ ಸಿದ್ದು ಬೇರೆ ಕಡೆ ಸ್ಪರ್ಧೆ: ಯಡಿಯೂರಪ್ಪ

ಬಾಗಲಕೋಟೆಯಲ್ಲಿ  ಈ ಬಾರಿ ಬಿಜೆಪಿಯಿಂದ ವೀರಣ್ಣ ಚರಂತಿಮಠ ಅವರೇ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಚ್‌ವೈ ಮೇಟಿ, ಅಜಯ್‌ ಕುಮಾರ್‌ ಸರನಾಯಕ ಪ್ರಬಲ ಆಕಾಂಕ್ಷಿಗಳು. ಇನ್ನು ಬಾದಾಮಿ ಕ್ಷೇತ್ರ ಯಾರಿ ಪಾಲಾಗಲಿದೆ ಎನ್ನುವ ಕುತೂಹಲವೂ ಇದೆ.