ಕಾಂಗ್ರೆಸ್‌ 10 ಶಾಸಕರು ಬಿಜೆಪಿ ಸೇರುತ್ತಾರೆ ಎಂದ ಆರ್. ಅಶೋಕ್‌ಗೆ ಡಿಕೆಶಿ ತಿರುಗೇಟು

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಈಗಾಗಲೇ ತೆರೆ ಮರೆ ರಾಜಕೀಯ ಸರ್ಕಸ್ ಶುರುವಾಗಿದೆ. ಕಾಂಗ್ರೆಸ್‌ ಪಕ್ಷದ 10 ಶಾಸಕರು ಬಿಜೆಪಿಗೆ ಎಂಬ ಸಚಿವ ಆರ್. ಅಶೋಕ್‌ ಮಾತಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.

Share this Video
  • FB
  • Linkdin
  • Whatsapp

ಕಾಂಗ್ರೆಸ್‌ ಪಕ್ಷದ 10 ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಸಚಿವ ಆರ್‌. ಅಶೋಕ್‌ ಹೇಳಿಕೆ ನೀಡಿದ್ದು, ಇದಕ್ಕೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಪಾಪ ಹತಾಶರಾಗಿರುವವರ ಜತೆ ನಾನೇನು ಮಾತಾಡಲಿ, ಬಿಜೆಪಿ ನಾಯಕರಿಗೆ ಸೋಲಿನ ಭೀತಿ ಕಾಣುತ್ತಿದೆ. ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಎಲೆಕ್ಷನ್‌ ಮಾಡಲಿ ಜನ ಎನು ಹೇಳುತ್ತಾರೆ ಎಂದು ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಮೇಶ್‌ ರಜಿನಿಯ 'ಸಂಘರ್ಷರಹಿತ ಪಾಲಕತ್ವ' ಪುಸ್ತಕ ಲೋಕಾರ್ಪಣೆ

Related Video