ಇಂದು 'ಪ್ರಜಾಧ್ವನಿ ಬಸ್ ಯಾತ್ರೆ'ಗೆ ಚಾಲನೆ: ಡಿಕೆಶಿ-ಸಿದ್ದು ಅಶ್ವಮೇಧ ಯಾಗ ಶುರು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, 2023ರ ಮಹಾ ಸಂಗ್ರಾಮಕ್ಕೆ ಕಾಂಗ್ರೆಸ್ ಅಶ್ವಮೇಧ ಯಾಗ ಶುರು ಮಾಡಿದೆ.
ಬೆಳಗಾವಿಯಿಂದ ಚುನಾವಣಾ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸಜ್ಜಾಗಿದ್ದು, ಬೆಳಗಾವಿಯ ವೀರಸೌಧದಿಂದ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ನೀಡಲಿದೆ. ಟಿಳಕವಾಡಿಯಲ್ಲಿರುವ ವೀರಸೌಧದಲ್ಲಿ ಯಾತ್ರೆ ಆರಂಭವಾಗಲಿದ್ದು, ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ಸಮರ್ಪಿಸಿ ಚರಕ ಧ್ವಜಾರೋಹಣ ಪವಿತ್ರ ಪಂಪಾ ಸರೋವರದ ಜಲ ತಂದು ಬಸ್ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಡಿ. ಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಸುರ್ಜೇವಾಲ್ ಚಾಲನೆ ನೀಡಲಿದ್ದಾರೆ. ಬೆಳಗಾವಿಯಿಂದ ಚಿಕ್ಕೋಡಿಗೆ ಪ್ರಜಾಧ್ವನಿ ಬಸ್ ಯಾತ್ರೆ ತೆರಳಲಿದ್ದು, ಒಂದೇ ಬಸ್‌ನಲ್ಲಿ ಕಾಂಗ್ರೆಸ್‌ನ 40 ಹಿರಿಯ ನಾಯಕರು ಇರಲಿದ್ದಾರೆ. ಬೆಳಗ್ಗೆ 11ಗಂಟೆಗೆ ಪ್ರಜಾಧ್ವನಿ ಸಮಾವೇಷ ನಡೆಯಲಿದೆ.