News Hour: ಬಿಜೆಪಿ ಪಾಲಿಗೆ ಸವಾಲಿನ ಕ್ಷೇತ್ರವಾದ ಅಥಣಿ, ಹುಬ್ಬಳ್ಳಿ ಸೆಂಟ್ರಲ್‌!

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಥಣಿ ಹಾಗೂ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ನಿಗದಿ ಮಾಡಿದೆ. ಅದೇನೇ ಆದರೂ ಈ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕು ಎಂದು ಪಣತೊಟ್ಟಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ.26): ಬಿಜೆಪಿ ಪಾಲಿಗೆ ಉಳಿದೆಲ್ಲಾ ಕ್ಷೇತ್ರಗಳು ಒಂದು ಕಡೆಯಾದರೆ, ಅಥಣಿ ಹಾಗೂ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರ ಇನ್ನೊಂದು ಸವಾಲು ಎನ್ನುವಂತಾಗಿದೆ. ಶತಾಯಗತಾಯ ಈ ಎರಡೂ ಕ್ಷೇತ್ರಗಳಲ್ಲಿ ಲಕ್ಷ್ಮಣ ಸವದಿ ಹಾಗೂ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಲೇಬೇಕು ಎನ್ನುವ ನಿಟ್ಟಿನಲ್ಲಿ ಪಣತೊಟ್ಟಿದೆ. ಇನ್ನೊಂದೆಡೆ ಬಿಜೆಪಿ ವಿರುದ್ಧ ಜಗದೀಶ್‌ ಶೆಟ್ಟರ್‌ ಸಿಡಿಮಿಡಿಯಾಗಿದ್ದಾರೆ. ಒಡೆದು ಆಳುವ ನೀತಿಯೇ ಬಿಜೆಪಿಯ ಅಜೆಂಡಾ ಎಂದು ಟೀಕೆ ಮಾಡಿದ್ದಾರೆ. ಕ್ಷಣದಲ್ಲಿಯೇ ಇಷ್ಟು ವರ್ಷದ ರಾಜಕಾರಣವನ್ನು ಹೊಸಕಿ ಹಾಕಿದ್ರೆ ಸುಮ್ಮನಿರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

Party Rounds: ಹುಬ್ಬಳ್ಳಿ ಅಖಾಡಕ್ಕೆ ರಾಜಾಹುಲಿ ಎಂಟ್ರಿ, ಬದಲಾಯ್ತು ಕಾಂಗ್ರೆಸ್‌ ರಣತಂತ್ರ!

ಇನ್ನು ಪ್ರಚಾರದ ವಿಚಾರಕ್ಕೆ ಬರೋದಾದರೆ, ಬಿಜೆಪಿಯ ಫೈರ್‌ಬ್ರ್ಯಾಂಡ್‌ ನಾಯಕ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬುಧವಾರ ಕರ್ನಾಟಕದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಜೆಡಿಎಸ್‌ನ ಭದ್ರಕೋಟೆ ಮಂಡ್ಯದಿಂದ ತಮ್ಮ ಪ್ರಚಾರ ಕಾರ್ಯವನ್ನು ಅವರು ಆರಂಭ ಮಾಡಿದರು. ಮಂಡ್ಯ ಬಿಜೆಪಿ ಕಡೆಯಿಂದ ಕಾಲಭೈರವನ ಕಂಚಿನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು.

Related Video