Karnataka assembly Election: ಪುತ್ರಿ ರಾಜನಂದಿನಿಗೆ ಟಿಕೆಟ್, ಖರ್ಗೆ ಭೇಟಿಯಾದ ಕಾಗೋಡು ತಿಮ್ಮಪ್ಪ!
ತನ್ನ ಪುತ್ರಿ ರಾಜನಂದಿನಿಗೆ ಟಿಕೆಟ್ ಕೊಡಿಸಲು ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಕಸರತ್ತು ನಡೆಸಿದ್ದಾರೆ. ಖರ್ಗೆಯವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರು (ಮಾ.22): ಪುತ್ರಿಗೆ ಟಿಕೆಟ್ ಕೊಡಿಸಲು ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಕಸರತ್ತು ನಡೆಸುತ್ತಿದ್ದಾರೆ. ಈ ಕುರಿತಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮಗಳು ರಾಜನಂದಿನಿಗೆ ಟಿಕೆಟ್ ಕೊಡುವಂತೆ ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ. ನಾನು ಮೂಲತಃ ಕಾಂಗ್ರೆಸ್. ಅನೇಕ ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಈ ಬಾರಿ ಒಂದು ಅವಕಾಶ ಕೊಡುವಂತೆ ಕೇಳಿದ್ದೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಹಸಿರುಮಕ್ಕಿ ಸೇತುವೆ ವಿಳಂಬ ಮಾಡುವುದು ಸರಿಯಲ್ಲ; ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕಾಗೋಡು ತಿಮ್ಮಪ್ಪ
ಟಿಕೆಟ್ ನೀಡುವ ಮುನ್ನ ಹಲವು ಬೇಡಿಕೆಗಳು ಬರುತ್ತಿವೆ. ಸಾಗರ-ಹೊಸನಗರ ಕ್ಷೇತ್ರದಲ್ಲಿ ಮಗಳು ರಾಜನಂದಿನಿಗೆ ಅವಕಾಶ ನೀಡಿ ಎಂದು ಕೇಳಿದ್ದೇನೆ. ಒಂದು ಅವಕಾಶ ಕೊಡಿ ಎಂದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.