ಆರು ಸಮೀಕ್ಷೆ.. ನೂರು ರಹಸ್ಯ..ಯಾರಿಗೆ ಬಹುಮತ..ಯಾರಿಗೆ ರಾಜ ಸಿಂಹಾಸನ..?

ಕರುನಾಡು ಕುತೂಹಲದಿಂದ ಕಾಯುತ್ತಿರುವ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೇ .ಇನ್ನು  ರಾಜ್ಯದಲ್ಲಿ ಸಮೀಕ್ಷೆಗಳು ಹೊರ ಬಿದ್ದಿದ್ದು, ಒಂದೊಂದು ಸಮೀಕ್ಷೆಗಳು ಒಂದೊಂದು ಕಥೆಯನ್ನು ಹೇಳುತ್ತಿವೆ. 

Share this Video
  • FB
  • Linkdin
  • Whatsapp

ಕರುನಾಡು ಕುತೂಹಲದಿಂದ ಕಾಯುತ್ತಿರುವ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೇ . ಹೀಗಾಗಿ ಕರ್ನಾಟಕದ ರಾಜ ಸಿಂಹಾಸನ ಯಾರಿಗೆ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಮೇ 13ರಂದು ಉತ್ತರ ಸಿಗಲಿದೆ. ರಾಜಕೀಯ ಪಕ್ಷಗಳು ಈ ಸಲ ಕಪ್ ನಮ್ದೇ ಎನ್ನುತ್ತಾ ರಣರಂಗದಲ್ಲಿ ಅಬ್ಬರಿಸ್ತಾ ಇವೆ. ಇನ್ನು ರಾಜ್ಯದಲ್ಲಿ ಸಮೀಕ್ಷೆಗಳು ಹೊರ ಬಿದ್ದಿದ್ದು, ಒಂದೊಂದು ಸಮೀಕ್ಷೆಗಳು ಒಂದೊಂದು ಕಥೆಯನ್ನು ಹೇಳುತ್ತಿವೆ. ಕೆಲವರು ಕಾಂಗ್ರೆಸ್‌ಗೆ ಪೂರ್ಣ ಬಹುಮತ ಎಂದು ಹೇಳಿದರೆ, ಅದಲ್ಲದೆ ಕೆಲ ಸಮೀಕ್ಷೆಗಳು ಬಿಜೆಪಿ ಅತೀ ದೊಡ್ಡ ಪಕ್ಷ ಅಂತಿವೆ. ಮತ್ತೊಂದು ಸಮೀಕ್ಷೆ ಜೆಡಿಎಸ್ ಕಿಂಗ್ ಮೇಕರ್ ಎನ್ನುವ ಸುಳಿವು ಬಿಚ್ಚಿಟ್ಟಿದೆ. ಹಾಗಾದರೆ ಸಮೀಕ್ಷೆಗಳ ಸಮೀಕ್ಷೆ ಏನ್ ಹೇಳ್ತಾ ಇದೆ..? 150, 140, 130, 120.. ಹೀಗೆ ಸೀಟುಗಳ ಲೆಕ್ಕ ಹಾಕುತ್ತಿರುವ ರಣಕಲಿಗಳಲ್ಲಿ ಯಾರ ಲೆಕ್ಕ ಪಕ್ಕಾ..? ಕರ್ನಾಟಕ ಸಿಂಹಾಸನ ಕಿರೀಟ ಯಾರ ಮುಕುಟಕ್ಕೆ ಸೇರಲಿದೆ..? ಈ ವಿಡಿಯೋ ನೋಡಿ 

Related Video