ಕಾಂಗ್ರೆಸ್ ಕೋಟೆಯಲ್ಲಿ ಕಾಳಗ: ಟಿಕೆಟ್ ಘೋಷಣೆಗೂ ಮೊದಲೇ ಕಲಹ ಶುರು

ಕಾಂಗ್ರೆಸ್'ನಲ್ಲಿ ಟಿಕೆಟ್ ಫೈಟ್  ನಡೆದಿದ್ದು, ಬೆಂಗಳೂರು, ಕೋಲಾರ ಹಾಗೂ ದೊಡ್ಡ ಬಳ್ಳಾಪುರದಲ್ಲೂ ಭಿನ್ನಮತ ಭುಗಿಲೆದ್ದಿದೆ. 
 

Share this Video
  • FB
  • Linkdin
  • Whatsapp

ಕೈ ಕೋಟೆಯಲ್ಲಿ ಕೋಲಾಹಲ ಎದ್ದಿದ್ದು, ಕಾಂಗ್ರೆಸ್ ಟಿಕೆಟ್'ಗಾಗಿ ಅಂತರ್ಯುದ್ಧ ಶುರುವಾಗಿದೆ. ಯುದ್ಧಕ್ಕೆ ಸಜ್ಜಾಗೋ ಹೊತ್ತಿನಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಸೈನಿಕ ದಂಗೆ ಆರಂಭಗೊಂಡಿದೆ. ಟಿಕೆಟ್'ಗಾಗಿ ಪಟ್ಟು ಹಿಡಿದಿರೋರು, ಪಕ್ಷದ ಪ್ರಧಾನ ಕಚೇರಿಗೇ ಬಂದು ಗುಟುರು ಹಾಕ್ತಿದ್ದಾರೆ. ಪಕ್ಷದ ನಾಯಕರ ವಿರುದ್ಧವೇ ದಂಗೆ ಎದ್ದಿದ್ದಾರೆ.ಹಾಲಿ ಕಾಂಗ್ರೆಸ್ ಶಾಸಕರ ವಿರುದ್ಧವೇ ಪಕ್ಷದ ಮುಖಂಡರು ತೊಡೆ ತಟ್ಟಿ ನಿಂತಿದ್ದಾರೆ. ಟಿಕೆಟ್'ಗಾಗಿ ಪಟ್ಟು ಹಿಡಿದು ಕೂತಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್'ನಲ್ಲಿ ಟಿಕೆಟ್'ಗಾಗಿ ಎದ್ದಿರೋ ಕೋಲಾಹಲ, ಹಾಲಾಹಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Uttara Kannada: ದೇವರೇ ಏನಿದು ಶಿಕ್ಷೆ?: ದೇವಸ್ಥಾನಕ್ಕೆ ಜಮೀನು ನೀಡದ ...

Related Video