Uttara Kannada: ದೇವರೇ ಏನಿದು ಶಿಕ್ಷೆ?: ದೇವಸ್ಥಾನಕ್ಕೆ ಜಮೀನು ನೀಡದ ಕುಟುಂಬಕ್ಕೆ ಬಹಿಷ್ಕಾರ

ಉತ್ತರ ಕನ್ನಡ ಜಿಲ್ಲೆಯ ಯಡೋಗಾ ನೀರಲಗದಲ್ಲಿ ಅಮಾನವೀಯ ಘಟನೆ ನಡೆದಿದ್ದು, 2017ರಲ್ಲೇ ಒಂದು ಕುಟುಂಬಕ್ಕೆ ಊರಿನ ಪಂಚರು ಬಹಿಷ್ಕಾರ ಹಾಕಿದ್ದಾರೆ.

First Published Jan 7, 2023, 11:42 AM IST | Last Updated Jan 7, 2023, 11:54 AM IST

21ನೇ ಶತಮಾನದಲ್ಲಿ ಕೂಡ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ತಪ್ಪಿಲ್ಲ. ದೇವಸ್ಥಾನಕ್ಕೆ ಜಮೀನು ನೀಡದ್ದಕ್ಕೆ ಕುಟುಂಬಕ್ಕೆ ಊರಿನಿಂದ ಬಹಿಷ್ಕಾರ ಹಾಕಿಲಾಗಿದ್ದು,ಯಾರು ನೆರವಿಗೆ ಧಾವಿಸದಂತೆ ಊರಿನ ಪಂಚರು ತೀರ್ಪು ನೀಡಿದ್ದಾರೆ. ಯಲ್ಲಾರಿ ಮಸನು ಕದಮ್  ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿಲಾಗಿದ್ದು, ಈ ಕುಟುಂಬ 1988ರಲ್ಲಿ 1 ಎಕರೆ ಜಮೀನು ಖರೀದಿಸಿತ್ತು.2017ರಲ್ಲಿ ಆ ಜಮೀನಲ್ಲಿ ದೇವರ ಉತ್ಸವ ಮಾಡಲಾಯಿತು. ಅದೇ ಜಮೀನಿನಲ್ಲಿ ದೇವಸ್ಥಾನ ಕಟ್ಟಲು ಪಂಚರು ತೀರ್ಮಾನಿಸಿದ್ದರು. ಆದ್ರೆ ತಮ್ಮ ಜಮೀನನ್ನು ದಾನ ನೀಡಲು ಯಲ್ಲಾರಿ ಕುಟುಂಬ ಒಪ್ಪಿಲ್ಲ. ನ್ಯಾಯಸ್ಥರ ಮಾತಿಗೆ ಒಪ್ಪದ ಕಾರಣಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿಲಾಗಿದೆ. ಇನ್ನು ಯಲ್ಲಾರಿ ಕುಟುಂಬದ ಜೊತೆ ಮಾತಾಡಿದ 7 ಕುಟುಂಬಕ್ಕೂ ಬಹಿಷ್ಕಾರ ಹಾಕಿ ಜೊತೆಗೆ 10 ಸಾವಿರ ದಂಡ ವಿಧಿಸಲಾಗಿದೆ.