Party Rounds: ಟೀಕಿಸುವ ಭರದಲ್ಲಿ ಮೋದಿಯನ್ನು ವಿಷದ ಹಾವಿಗೆ ಹೋಲಿಸಿದ ಖರ್ಗೆ! ಬಳಿಕ ಯೂಟರ್ನ್!

ಪ್ರಧಾನಿ ಮೋದಿಯನ್ನು ಟೀಕೆ ಮಾಡುವ ಭರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಕಾರಿ ಹಾವು ಎಂದು ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಏ.27): ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಸಮಯದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ವಿಷಕಾರಿ ಹಾವು ಎಂದಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಇದೇ ವಿಚಾರವನ್ನು ಮುನ್ನಲೆಯಾಗಿ ಇಟ್ಟುಕೊಂಡು, ಕಾಂಗ್ರೆಸ್‌ ಪಕ್ಷ ಪ್ರಧಾನಿಯನ್ನು ಅವಮಾನ ಮಾಡಿದೆ ಎಂದು ಹೇಳಿದೆ. ಶೋಭಾ ಕರಂದ್ಲಾಜೆ ಈ ಕುರಿತಾಗಿ ಚುನಾವಣಾ ಆಯೋಗಕ್ಕೆ ದೂರು ಕೂಡ ದಾಖಲು ಮಾಡಿದ್ದಾರ.ೆ ಇಲ್ಲಿಯವರೆಗೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ವೈಯಕ್ತಿಕ ಟೀಕೆಗಳಿಂದ ಕಾಂಗ್ರೆಸ್‌ ದೂರವುಳಿದಿತ್ತಾದರೂ, ಈಗ ಮೋದಿ ವಿರುದ್ಧ ಸ್ವತಃ ಕಾಂಗ್ರೆಸ್‌ ಅಧ್ಯಕ್ಷರೇ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ. ವಿವಾದವಾಗುವ ಲಕ್ಷಣ ಕಂಡ ಬೆನ್ನಲ್ಲಿಯೇ ಅವರು ಯೂ ಟರ್ನ್‌ ಹೊಡೆದಿದ್ದಾರೆ.

ಕಾಂಗ್ರೆಸ್‌ ಕೊರಳಿಗೆ ಸುತ್ತಿಕೊಂಡ ಖರ್ಗೆಯ 'ಮೋದಿ ವಿಷಸರ್ಪ!

Related Video