ಕಾಂಗ್ರೆಸ್ ಕೊರಳಿಗೆ ಸುತ್ತಿಕೊಂಡ ಖರ್ಗೆಯ 'ಮೋದಿ ವಿಷಸರ್ಪ!
ಮೋದಿ ವಿಷಸರ್ಪ ಇದ್ದಂತೆ ನೆಕ್ಕಿದರೆ ಕಥೆ ಮುಗೀತು ಎಂದು ಖರ್ಗೆ ನೀಡಿರುವ ಹೇಳಿಕೆ ಈಗ ಕಾಂಗ್ರೆಸ್ ಪಾಳಯಕ್ಕೆ ತಳಮಳ ಸೃಷ್ಟಿಸಿದೆ. ಈ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೈ ಪಡೆ ಮುಂದಾಗಿದೆ.
ಬೆಂಗಳೂರು (ಏ.27): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಬಗ್ಗೆ ನೀಡಿರುವ ಹೇಳಿಕೆ ಈಗ ಕಾಂಗ್ರೆಸ್ ಪಾಳಯಕ್ಕೆ ತಳಮಳ ಸೃಷ್ಟಿಸಿದೆ. ಮೋದಿ ವಿಷಸರ್ಪ ಇದ್ದಂತೆ ನೆಕ್ಕಿದರೆ ಕಥೆ ಮುಗೀತು ಎಂದು ಖರ್ಗೆ ಗದಗದಲ್ಲಿ ಪ್ರಚಾರ ಭಾಷಣದಲ್ಲಿ ಹೇಳಿದ್ದು, ಬಿಜೆಪಿ ನಾಯಕರ ಕಣ್ಣ ಕೆಂಪಾಗಿಸಿದೆ. ಮಾತ್ರವಲ್ಲ ಈ ಬಗ್ಗೆ ಚುನಾವಣಾ ಆಯೋಗಕ್ಕೂ ಬಿಜೆಪಿ ದೂರು ಸಲ್ಲಿಸಿದೆ. ಈ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೈ ಪಡೆ ಮುಂದಾಗಿದೆ. ಮಲ್ಲಿಕಾರ್ಜುನ ಖರ್ಗೆ ಪರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬ್ಯಾಟಿಂಗ್ ಮಾಡಿದ್ದು, ಮೋದಿ ವಿಷ ಹೇಳಿಕೆಗೆ ದಲಿತ ಅಸ್ತ್ರ ಪ್ರಯೋಗಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ದಲಿತ ಕುಟುಂಬದಲ್ಲಿ ಹುಟ್ಟಿ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಖರ್ಗೆ ಅವರ ಹೇಳಿಕೆ ಹಿಂದೆ ದಲಿತ ಸಮುದಾಯ, ಬಡವರ ನೋವು, ದಮನಿತರ ಕೂಗು ಅಡಗಿದೆ. ಬಿಜೆಪಿ ತಾಕತ್ತಿದ್ದರೆ ದಲಿತರನ್ನ ಪಕ್ಷದ ಅಧ್ಯಕ್ಷರಾಗಿ ಮಾಡಲಿ. ಖರ್ಗೆ ಅವರು ವೈಯಕ್ತಿಕ ಟೀಕೆ ಮಾಡಿಲ್ಲ, ಇದು ಸಿದ್ದಾಂತದ ಟೀಕೆ. ಕರ್ನಾಟಕದಲ್ಲಿ ವ್ಯಕ್ತಿಗತವಾಗಿ ಚುನಾವಣೆ ನಡೆಯುತ್ತಿಲ್ಲ. ಇಲ್ಲಿ ಆರೂವರೆ ಕೋಟಿ ಜನರ ಚುನಾವಣೆ. 40% ಕಮಿಷನ್ ವಿರುದ್ಧದ ಚುನಾವಣೆ ಇದನ್ನ ಸಹಿಸಲಾಗದೆ, ಖರ್ಗೆ ಹೇಳಿಕೆ ಇಟ್ಟುಕೊಂಡು ವೈಯಕ್ತಿಕ ಚುನಾವಣೆ ಮಾಡಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿದ್ದಾರೆ.
ಬೊಮ್ಮಾಯಿ ಪ್ರತಿಕ್ರಿಯೆ: ಮೋದಿ ವಿಷಸರ್ಪ ಅನ್ನುವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೋದಿ ರಾಷ್ಟ ದ್ರೋಹಿಗಳಿಗೆ ಭಯೋತ್ಪಾದಕರಿಗೆ ಶಾಂತಿ ಕದಡುವವರಿಗೆ ಸಿಂಹ ಸ್ವಪ್ನ ಆಗಿದ್ದಾರೆ. ಖರ್ಗೆ ಅವರಿಗೆ ಯಾಕ್ ಹಂಗ ಅನಿಸ್ತೋ ಗೊತ್ತಿಲ್ಲ. ಹಿಂಗ್ ಮಾತಾಡಿನೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ. ಕಾಂಗ್ರೆಸ್ ನವರಿಗೆ ಅಧಿಕಾರದ ಅಮಲು ಇಳಿದಿಲ್ಲ. ಸುಸಂಸ್ಕೃತ ಕರ್ನಾಟಕ ಇದು. ಎಲ್ಲರಿಗೂ ಗೌರವ ಕೊಡಬೇಕು. ಇದು ನಮ್ಮ ಸಂಸ್ಕೃತಿ ಎಂದಿದ್ದಾರೆ.
ಮಲ್ಲಿಕಾರ್ಜುನ್ ಮಾತಿನಿಂದ ದುಃಖವಾಗಿದೆ: ಕರಂದ್ಲಾಜೆ
ಮೋದಿ ವಿಷದ ಹಾವು ಅದನ್ನು ನೀವು ನೆಕ್ಕಿದರೆ ಅಲ್ಲೇ ಮಲಗಿ ಬಿಡ್ತಿರಿ ಎಂದು ನರಗುಂದದಲ್ಲಿ ಖರ್ಗೆ ಹೇಳಿದ್ದಾರೆ. ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯನ್ನು ಪಾಕಿಸ್ತಾನ ಕೇಳಲಿದೆ. ಪ್ರಪಂಚ ನೋಡಲಿದೆ. ಮಲ್ಲಿಕಾರ್ಜುನ ಖರ್ಗೆಯ ಮಾತಿನಿಂದ ನಮಗೆ ದುಃಖ ಆಗಿದೆ. ಈ ಹೇಳಿಕೆ ಕನ್ನಡದ ನೆಲಕ್ಕೆ ಮಾಡಿದ ಅವಮಾನ. ತಕ್ಷಣ ಅವರು ಕ್ಷಮೆ ಕೇಳಬೇಕು. ಈ ಹೇಳಿಕೆಯನ್ನು ಖರ್ಗೆ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಖರ್ಗೆ ಹೋದಲ್ಲಿ ಜನ ಸೇರ್ತಾ ಇಲ್ಲ. ಮೀಡಿಯಾ ಗಮನ ಸೆಳೆಯಲು ಖರ್ಗೆ ಹೀಗೆ ಹೇಳಿದ್ದಾರೆ.
ಖರ್ಗೆ ಮಾತಾಡಿದ್ದು ಸರಿಯಲ್ಲ: ಧರ್ಮೇಂದ್ರ ಪ್ರಧಾನ್ ಆಕ್ರೋಶ
ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಎಲ್ಲಾರ ಬಗ್ಗೆ ಗೌರವ ತೋರಬೇಕು. ಆದರೆ ಇಂದು ಮಲ್ಲಿಕಾರ್ಜುನ ಖರ್ಗೆ ಮಾತಾಡಿದ್ದು ಸರಿಯಲ್ಲ. ಮಲ್ಲಿಕಾರ್ಜುನ ಖರ್ಗೆ ಒಬ್ಬ ಗೌರವದ ವ್ಯಕ್ತಿ. ಈ ಮೊದಲು ಮೋದಿಯವರನ್ನು ಮೌತ್ ಕಾ ಸೌದಾಗರ್ ಎಂದು ಅವಮಾನ ಮಾಡಿದರು. ದುರ್ಯೋದನ ಎಂದರು. ಸಾಮಾಜಿಕ ಜೀವನ, ರಾಜಕೀಯ ಜೀವನದಲ್ಲಿ ಎಲ್ಲರೂ ತಮ್ಮ ಗೌರವ ಕಾಪಾಡಿಕೊಳ್ಳೇಕು. ಖರ್ಗೆಯವರು ಪ್ರಧಾನಿಯವರ ಬಗ್ಗೆ ಮಾತಾಡಿದ್ದಾರೆ. ಪ್ರಧಾನಿಯವರನ್ನು ನಾನು ಹತ್ತಿರದಿಂದ ಬಲ್ಲೆ. ಪ್ರಧಾನಿಯವರಿಗೆ ಖರ್ಗೆ ಅವರ ಮೇಲೆ ಅಪಾರ ಗೌರವ ಇದೆ. ಎಲ್ಲರೂ ಮರ್ಯಾದೆಯ ಸೀಮೆಯೊಳಗೆ ಇರಬೇಕಾತ್ತದೆ. ಸಾವಿನ ವ್ಯಾಪಾರಿ, ದುರ್ಯೋಧನ, ಸಾಮಾನ್ಯ ಚಾಯ್ ವಾಲಾ, ಹುಳ ಇಂಥ ಪದಗಳನ್ನು ಕಾಂಗ್ರೆಸ್‌ನವರು ಬಳಸಿದ್ದಾರೆ. ಈಗ ಮತ್ತೆ ಅದೇ ಥರ ಖರ್ಗೆ ಮಾತಾಡಿದ್ದಾರೆ. ಮೋದಿಯವರ ಬಗ್ಗೆ ಖರ್ಗೆ ಮಾತಾಡಿರೋದನ್ನು ಯಾರೂ ಒಪ್ಪಲ್ಲ.
Bengaluru:ಎಐಎಡಿಎಂಕೆ ಅಭ್ಯರ್ಥಿಯೆಂದು ಚುನಾವಣಾ ಆಯೋಗಕ್ಕೆ ವಂಚಿಸಲು ಯತ್ನ,
ಕರ್ನಾಕಟದಲ್ಲಿ ಮೋದಿವರಿಗೆ ದೊಡ್ಡ ಗೌರವ ಇದೆ. ಇದು ಖರ್ಗೆಯವರಿಗೆ ಸಹಿಸಲು ಆಗ್ತಿಲ್ಲ. ವಿಪಕ್ಷ ನಾಯಕರ ವಿಚಾರದಲ್ಲಿ ಮೋದಿಯವರಿಗೆ ಬಹಳ ಗೌರವ ಇದೆ. ಖರ್ಗೆಯವರ ಅಸಾಂವಿಧಾನಿಕವಾಗಿ, ಅನಾಗರಿಕರಾಗಿ ಮೋದಿಯವರ ಬಗ್ಗೆ ಮಾತಾಡಿದ್ದಾರೆ. ಖರ್ಗೆಯವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ವಿಷದ ಹಾವು, ನೆಕ್ಕಿದರೆ ಕಥೆ ಮುಗೀತು: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ವ್ಯಾಪಕ ಆಕ್ರೋಶ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.