Assembly Election 2023 : ಅಮಿತ್‌ ಶಾ ಹೈ ವೋಲ್ಟೇಜ್‌ ಮೀಟಿಂಗ್‌: ಹಳೆ ಮೈಸೂರು ಗೆಲ್ಲಲು ರಣವ್ಯೂಹ

ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೈವೋಲ್ಟೇಜ್‌  ಮೀಟಿಂಗ್‌ ನಡೆಸಿದ್ದು, ಹಳೆ ಮೈಸೂರು ಗೆಲ್ಲಲು ಅಮಿತ್‌ ಶಾ ರಣವ್ಯೂಹ ರಚಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಹಳೇ ಮೈಸೂರು ಭಾಗದ ಪ್ರಭಾವಿಗಳಿಗೆ ಆಹ್ವಾನ ನೀಡಲಾಗಿದೆ. ಮೈಸೂರು ಭಾಗದ 43 ನಾಯಕರಿಗೆ ಶಾ ಆಹ್ವಾನ ನೀಡಿದ್ದು, ಒಂಬತ್ತು ಸಚಿವರು, ಆರು ಶಾಸಕರಿಗೆ ಸಭೆಗೆ ಆಹ್ವಾನ ನೀಡಲಾಗಿದೆ. 2 ಜನ ಎಂ.ಎಲ್‌.ಸಿ 2 ಜನ ಮಾಜಿ ಎಂ.ಎಲ್‌.ಸಿ ಪಕ್ಷದ ಎಲ್ಲಾ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ವಿಜಯೇಂದ್ರ, ವಿಶ್ವನಾಥ್‌ ಹಾಗೂ ಶ್ರೀನಿವಾಸ್ ಪ್ರಸಾದ್‌'ಗೆ ಸಭೆಯಿಂದ ಕೊಕ್ ನೀಡಲಾಗಿದೆ. ಈ ಸಭೆಯಲ್ಲಿ ಪ್ರಮುಖವಾಗಿ ಒಕ್ಕಲಿಗ ನಾಯಕತ್ವವನ್ನು ಬೆಳೆಸುವ ಕುರಿತು ಚರ್ಚೆ ಆಗಿದೆ. ಹಳೆ ಮೈಸೂರು ಭಾಗದಲ್ಲಿ ಉತ್ತಮವಾದ ಫಲಿತಾಂಶ ಬರದೇ ಇರುವುದಕ್ಕಾಗಿ ಈ ಭಾಗದಲ್ಲಿ ಪಕ್ಷವನ್ನು ಕಟ್ಟಬೇಕು ಎನ್ನುವಂತ ಲೆಕ್ಕಾಚಾರವನ್ನು ಇಟ್ಟುಕೊಂಡಿದ್ದು, ಅದಕ್ಕೆ ಬೇಕಾದಂತಹ ಪ್ಲಾನ್‌ ಮಾಡಲಾಗುತ್ತಿದೆ.

ಕಟೀಲ್ ಒಬ್ಬ ವಿದೂಷಕ, ಅವರ ಮಾತಿಗೆ ಉತ್ತರ ಕೊಡಲ್ಲ: ಸಿದ್ದರಾಮಯ್ಯ

Related Video