ಮೀಸಲಾತಿ 3ಎ, 3ಬಿ ನವರಿಗೆ ಕಣ್ಣೊರೆಸುವ ತಂತ್ರವಾಗಿದೆ. ಸಂವಿಧಾನದಲ್ಲಿ ಇದಕ್ಕೆ ಮಾನ್ಯತೆ ಇಲ್ಲ. 2ಸಿ, 2ಡಿ ಬಗ್ಗೆ ಮಾತನಾಡೋಕೆ ನಾನು ಅಧ್ಯಯನ ಮಾಡಬೇಕು ಎಂದ ಸಿದ್ದರಾಮಯ್ಯ

ವಿಜಯಪುರ(ಡಿ.31): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಒಬ್ಬ ವಿದೂಷಕ, ವಿದೂಷಕನ ಮಾತಿಗೆ ಉತ್ತರ ಕೊಡಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುತ್ತಿಗೆದಾರ ಕೆಂಪಣ್ಣ ಜೊತೆಗೆ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗ್ತಾರೆ ಎಂದಿದ್ದ ಕಟೀಲ್‌ ವಿರುದ್ಧ ಸಿದ್ದು ಹರಿಹಾಯ್ದಿದ್ದಾರೆ.

ಸರ್ಕಾರ ಮಿಸಲಾತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ 3ಎ, 3ಬಿ ನವರಿಗೆ ಕಣ್ಣೊರೆಸುವ ತಂತ್ರವಾಗಿದೆ. ಸಂವಿಧಾನದಲ್ಲಿ ಇದಕ್ಕೆ ಮಾನ್ಯತೆ ಇಲ್ಲ. 2ಸಿ, 2ಡಿ ಬಗ್ಗೆ ಮಾತನಾಡೋಕೆ ನಾನು ಅಧ್ಯಯನ ಮಾಡಬೇಕು. 3A, 3B ಎಲ್ಲ ಜಾತಿಗಳು 2ಸಿ, 2ಡಿ ಗೆ ಬರ್ತಾವಾ?, 2ಸಿ, 2ಡಿ ಅವರಿಗೆ ಇವರು ಏನೆಲ್ಲ ಕೊಡ್ತಾರೆ ಗೊತ್ತಾಗಬೇಕಲ್ಲ ಅಂತ ಹೇಳಿದ್ದಾರೆ.

ಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿದ ಸಾರಿಗೆ ಸಚಿವ, ಆತಂಕ ಬೇಡ ಎಂದ ಶ್ರೀರಾಮುಲು

ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳು ಪೂರ್ಣ

ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತಂದರೆ ಐದು ವರ್ಷಗಳಲ್ಲಿ .2 ಲಕ್ಷ ಕೋಟಿ ವೆಚ್ಚ ಮಾಡಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ವಾಗ್ದಾನ ಮಾಡಿದರು.

ಶುಕ್ರವಾರ ನಗರದ ದರಬಾರ ಹೈಸ್ಕೂಲ್‌ ಮೈದಾನದಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಜಲಾಂದೋಲನ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಜನತೆ ಬರುವ ಚುನಾವಣೆಯಲ್ಲಿ ನಮಗೆ ಆಶೀರ್ವದಿಸಿದರೆ ಖಂಡಿತವಾಗಿಯೂ ಪ್ರತಿವರ್ಷ .40,000 ಕೋಟಿ ವೆಚ್ಚ ಮಾಡಿ ರಾಜ್ಯದ ಕೃಷ್ಣಾ, ಭದ್ರಾ, ಎತ್ತಿನಹೊಳೆ, ಮೇಕೆದಾಟು ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ನುಡಿದಂತೆ ನಡೆದ ಕಾಂಗ್ರೆಸ್‌:

ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿತ್ತು. ಈ ಪೈಕಿ ಕೇವಲ ಶೇ.10ರಷ್ಟುಭರವಸೆಗಳನ್ನು ಮಾತ್ರ ಈಡೇರಿಸಿದೆ. ಆದರೆ ಈ ಹಿಂದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 165 ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿತ್ತು. ಈ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಕಾಂಗ್ರೆಸ್‌ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ .1.5 ಲಕ್ಷ ಕೋಟಿ ನೀರಾವರಿ ಯೋಜನೆಗಳಿಗೆ ವೆಚ್ಚ ಮಾಡಲಾಗುವುದು ಎಂದು ಸದನದಲ್ಲಿಯೂ ಹಾಗೂ ಹೊರಗಡೆಯೂ ಬಿಜೆಪಿ ಹೇಳಿತ್ತು. ಆದರೆ ಬಿಜೆಪಿ ಸರ್ಕಾರ 3.5 ವಷÜರ್‍ದಲ್ಲಿ ಕೇವಲ .45,000 ಕೋಟಿ ಮಾತ್ರ ಖರ್ಚು ಮಾಡಿದೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು. ಇನ್ನೂ .1 ಲಕ್ಷ ಕೋಟಿ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿಕೊಂಡು ದೇಶ ಹಾಗೂ ರಾಜ್ಯದ ಜನತೆಯನ್ನು ಲೂಟಿ ಮಾಡುತ್ತಿದೆ. ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದು 40 ಪರ್ಸೆಂಟೇಜ್‌ ಸರ್ಕಾರವಾಗಿದೆ. ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಪತ್ರ ಬರೆದರೆ ಅದಕ್ಕೆ ಯಾವುದೇ ಕ್ರಮವಿಲ್ಲ. ಅದರ ಬದಲಾಗಿ ಪತ್ರ ಬರೆದ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುತ್ತಿದೆ. ಇಂತಹ ಭ್ರಷ್ಟಸರ್ಕಾರ ತೊಲಗಿಸಲು ಕಾಂಗ್ರೆಸ್ಸಿಗೆ ಮತ ನೀಡಬೇಕು ಎಂದರು.

136 ಸ್ಥಾನ ಗೆಲ್ಲುವ ವಿಶ್ವಾಸ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಮಾತನಾಡಿ, ರಾಜ್ಯದಲ್ಲಿ ಜನರು ಕಾಂಗ್ರೆಸ್‌ ಪರವಾಗಿದ್ದಾರೆ. ಭ್ರಷ್ಟಾಚಾರ ಹಾಗೂ ಸುಳ್ಳಿನ ಸರ್ಕಾರ ಕಿತ್ತೊಗೆಯಲು ಶಪಥ ಮಾಡಿದ್ದಾರೆ. ಹಾಗಾಗಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ 136 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಖಂಡಿತವಾಗಿಯೂ ಕಾಂಗ್ರೆಸ್‌ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಐದು ವರ್ಷಗಳಲ್ಲಿ .2 ಲಕ್ಷ ಕೋಟಿ ನೀಡುವ ಸಂಕಲ್ಪ ಮಾಡಿದ್ದೇವೆ. ಪ್ರತಿಯೊಬ್ಬರು ತಮ್ಮ ಒಂದು ವೋಟ್‌ ನೀಡುವುದರ ಜೊತೆ ಜೊತೆಯಲ್ಲಿಯೇ ಇತರೆ ಐದು ಜನರ ವೋಟ್‌ ಕಾಂಗ್ರೆಸ್ಸಿಗೆ ಹಾಕಿಸಿದರೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಖಂಡಿತವಾಗಿಯೂ ಬರುತ್ತದೆ. ಮತದಾರರು ಕಾಂಗ್ರೆಸ್ಸಿಗೆ ಆಶೀರ್ವದಿಸಿದರೆ ಜನರ ಶ್ರೇಯೋಭಿವೃದ್ಧಿಗೆ ಕಂಕಣ ಬದ್ಧರಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ:

ಬಿಜೆಪಿ ಸರ್ಕಾರ ಸುಳ್ಳುಗಾರರ ಸರ್ಕಾರ, ಮೋಸ ಮಾಡುವ ಸರ್ಕಾರ. ಇದು ಬರೀ ಪೇಪರ್‌ ಟೈಗರ್‌ ಸರ್ಕಾರ. ಜಾತಿ, ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಆಧಾರದ ಮೇಲೆ ಬಿಜೆಪಿ ಸರ್ಕಾರ ನಿಂತಿದೆ. ಇನ್ನು ಕೇವಲ 90 ದಿನಗಳು ಮಾತ್ರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. ಬಿಜೆಪಿ ಸರ್ಕಾರ ಈಗ ದಿನಗಣನೆ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Karnataka Assembly Election 2023: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರಕ ನೀರಾವರಿ ಯೋಜನೆಗಳ ಎಸ್ಟಿಮೇಟ್‌ನಲ್ಲಿ ಅಕ್ರಮ ನಡೆಸಿದೆ. .500 ಕೋಟಿ ಎಸ್ಟಿಮೇಟ್‌ ಅನ್ನು .1000 ಕೋಟಿ ಮಾಡುತ್ತದೆ. ಡಬಲ್‌ ಎಸ್ಟಿಮೇಟ್‌ ತಯಾರಿಸಿ ದುಡ್ಡು ಹೊಡೆಯುತ್ತಿದೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್‌ ಸುರ್ಜೆವಾಲ, ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಎಸ್‌.ಆರ್‌.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ,ಕೆ. ಹರಿಪ್ರಸಾದ ಮಾತನಾಡಿದರು.