Ground Report: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಟಿಕೆಟ್‌ಗೆ ಹೆಚ್ಚಿದ ಬೇಡಿಕೆ: ಕಾಂಗ್ರೆಸ್-ಜೆಡಿಎಸ್ ಸಮಬಲ ಹೋರಾಟ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಿಟಿಕಲ್ ಗ್ರೌಂಡ್ ರಿಪೋರ್ಟ್ ಹೀಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಹಾಲಿಗಳಿಗೆ ಮಣೆ ಹಾಕಲಾಗುತ್ತಿದೆ. ಹಾಲಿ ಶಾಸಕರಿಗೆ ಆಯಾ ಪಕ್ಷಗಳ ಟಿಕೆಟ್ ಬಹುತೇಕ ಖಾತ್ರಿ ಇದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಬಲದ ಹೋರಾಟವನ್ನು ನಡೆಸಲು ಸಜ್ಜಾಗಿವೆ. 5 ಕ್ಷೇತ್ರಗಳ ಹಾಲಿ ಶಾಸಕರಿಗೆ ಆಯಾ ಪಕ್ಷಗಳ ಟಿಕೆಟ್ ಬಹುತೇಕ ಪಕ್ಕ ಆಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್'ಗಿಂತ ಬಿಜೆಪಿ ಟಿಕೆಟ್ ಬೇಡಿಕೆ ಹೆಚ್ಚಾಗಿದೆ. ಈ ಬಾರಿ ಸುಧಾಕರ್ ಬಿಜೆಪಿಯಿಂದಲೇ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಚಿಂತಾಮಣಿಯಲ್ಲಿ ಶಾಸಕ ಸ್ಥಾನಕ್ಕೆ ರೆಡ್ಡಿಗಳ ಕಾಳಗ ನಡೆಯಲಿದೆ. ಗೌರಿಬಿದನೂರಿನಲ್ಲಿ ಶಿವಶಂಕರ ರೆಡ್ಡಿ ಕಟ್ಟಿಹಾಕಲು ಯತ್ನ ನಡೆದಿದೆ. ಶಿಡ್ಲಘಟ್ಟದಲ್ಲಿ ರಾಜಣ್ಣನಿಗೆ ಬಿಜೆಪಿ ಮಣೆ ಹಾಕಲಿದೆ.