Asianet Suvarna News Asianet Suvarna News

ಒಂದು ವೋಟ್ ಮಾಡೋಕೆ ಎರಡೂವರೆ ಗಂಟೆ ಬೇಕಾ?: ಮೋದಿ ವಿರುದ್ಧ ಚುನಾವಣಾ ಅಯೋಗಕ್ಕೆ ಕಾಂಗ್ರೆಸ್‌ ದೂರು!

ಗುಜರಾತ್‌ ವಿಧಾನಸಭೆಗೆ ಇಂದು 2ನೇ ಹಂತದ ಮತದಾನ ನಡೆದಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸಾಬರಮತಿ ಕ್ಷೇತ್ರದ ರಾಣಿಪ್‌ ಮತಗಟ್ಟೆಯಲ್ಲಿ ಮೋದಿ ಬೆಳಗ್ಗೆ ಮತದಾನ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ತಕರಾರು ಎತ್ತಿದೆ.
 

Gujarat Assembly Polls 2022 Congress Will appeal to EC against PM Modi san
Author
First Published Dec 5, 2022, 3:25 PM IST

ಅಹಮದಾಬಾದ್‌ (ಡಿ.5): ಒಂದು ವೋಟ್‌ ಮಾಡೋಕೆ ಪ್ರಧಾನಿ ನರೇಂದ್ರ ಮೋದಿ ಎರಡೂವರೆ ಗಂಟೆ ರೋಡ್‌ ಶೋ ಮಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನ ಹಾಕುವ ವೋಟ್‌ನಷ್ಟೇ ಮೌಲ್ಯ ಪ್ರಧಾನಿ ಹಾಕುವ ವೋಟ್‌ಗಿರುತ್ತದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ವೋಟ್‌ ಮಾಡೋಕೆ ತೆರಳಿದರೆ ಎರಡೂವರೆ ಗಂಟೆಗಳ ಕಾಲ ರೋಡ್‌ ಶೋ ಮಾಡಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿಯ ವಿರುದ್ಧ ಚುನಾವಣಾ ಆಯೋಗಕ್ಕೆ ಈ ಕುರಿತಾಗಿ ದೂರು ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ. ಕೊನೇ ಹಂತದ ಚುನಾವಣೆಯಲ್ಲಿ ಒಟ್ಟು 93 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ರಾಣಿಪ್‌ ಮತಗಟ್ಟೆಯ ನಿಶಾನ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಮತದಾನಕ್ಕೆ ಆಗಮಿಸುವ ವೇಳೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಮೋದಿ ಆಗಮನದ ಹಿನ್ನಲೆಯಲ್ಲಿ ಸಾಕಷ್ಟು ಜನ ಕೂಡ ಜಮಾಯಿಸಿದ್ದರು. ಈ ವೇಳೆ ಕೆಲ ಮೀಟರ್‌ಗಳ ದೂರದಲ್ಲಿಯೇ ತಮ್ಮ ಕಾರ್‌ಅನ್ನು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ನಡೆದುಕೊಂಡೇ ಬಂದು ಮತದಾನ ಮಾಡಿದ್ದರು. ಈ ವೇಳೆ ಸಾಕಷ್ಟು ಜನ ಸೇರಿದ್ದ ಕಾರಣ ಅವರಿಗೆ ಕೈಬೀಸಿಕೊಂಡೇ ಮತಗಟ್ಟೆಗೆ ಆಗಮಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ರೀತಿಯ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಕಿಡಿಕಿಡಿಯಾಗಿದೆ. ಇಂದು ಗುಜರಾತ್‌ನಲ್ಲಿ ಚುನಾವಣೆಯ ಸಮಯ. ಈ ವೇಳೆ ಮೋದಿ ರೋಡ್‌ ಶೋ ಮಾಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣೆಯ ದಿನ ಮತಗಟ್ಟೆಗ ಬರುವ ಸಮಯದಲ್ಲಿ ರೋಡ್‌ ಶೋಅವನ್ನು ನಿರಾಕರಿಸಿದ್ದಾರೆ. ಪಿಎಂ ಮೋದಿ ಹಾಗೂ ಅವರ ಪಕ್ಷದವರು ವಿವಿಐಪಿಗಳು. ಅವರು ಏನೇ ಮಾಡಿದರೂ, ಚುನಾವಣಾ ಆಯೋಗ ಅವರನ್ನು ಕ್ಷಮಿಸುತ್ತದೆ ಎಂದು ಪವನ್‌ ಖೇರಾ ಟೀಕೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಚುನಾವಣಾ ಆಯೋಗವು ಭಯದಿಂದ ಮೌನವಾಗಿದೆ ಎಂದು ಕಿಡಿಕಾರಿದ್ದಾರೆ. ಇಂತಹ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಕಾಂಗ್ರೆಸ್ ಚರ್ಚಿಸುತ್ತಿದೆ ಎಂದರು. ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ಮೋದಿ ಇಂದು ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು, ರಾಜ್ಯದ ಜನರು ಎಲ್ಲರ ಮಾತನ್ನು ಕೇಳುತ್ತಾರೆ, ಆದರೆ ಸತ್ಯವನ್ನು ಒಪ್ಪಿಕೊಳ್ಳುವುದು ಅವರ ಸ್ವಭಾವ ಎಂದು ಹೇಳಿರುವುದು ಗಮನಾರ್ಹವಾಗಿದೆ.

ಚುನಾವಣಾ ಆಯೋಗದ ಮೇಲೂ ಕಿಡಿ:  ಕಾಂಗ್ರೆಸ್ ಮುಖಂಡ ಪವನ್ ಖೇರಾ ಮಾತನಾಡಿ, ಯಾವುದೇ ವ್ಯಕ್ತಿಯ ಮತದ ಮೌಲ್ಯ ಪ್ರಧಾನಿಯ ಮತಕ್ಕೆ ಸಮಾನವಾಗಿರುತ್ತದೆ. ಪ್ರಧಾನಿ ಮತದಾನ ಮಾಡಲು ಹೊರಟಾಗ ಎರಡೂವರೆ ಗಂಟೆ ರೋಡ್ ಶೋ ಮಾಡುತ್ತಾರೆ. ಚುನಾವಣಾ ಆಯೋಗದ ಇದರ ಬಗ್ಗೆ ಪ್ರಶ್ನೆಯನ್ನೇ ಮಾಡೋದಿಲ್ಲ.ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿರುವುದು ಅತ್ಯಂತ ವಿಷಾದದ ಸಂಗತಿ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಇದನ್ನು ನಿರಂತರವಾಗಿ ಮಾಡಲಾಗುತ್ತಿದೆ. ಚುನಾವಣಾ ಆಯೋಗ ಸ್ವಲ್ಪ ಗಮನಹರಿಸುತ್ತದೆ ಎಂದು ನಾವು ಭಾವಿಸಿದ್ದೇವೆ, ಆದರೆ ಚುನಾವಣಾ ಆಯೋಗವು ಇದಕ್ಕೆ ಹೆದರುತ್ತಿರುವುದು ಕಾಣುತ್ತಿದೆ ಎಂದಿದ್ದಾರೆ.

Gujarat Election: ರಾಣಿಪ್‌ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನ

ನಡುಹಗಲಲ್ಲೇ ಪ್ರಜಾಪ್ರಭುತ್ವದ ಕಗ್ಗೊಲೆ: ಪ್ರಧಾನಿಯವರ ನೇತೃತ್ವದಲ್ಲಿಯೇ ನಡು ಹಗಲಲ್ಲಿಯೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಚುನಾವಣಾ ಆಯೋಗದ ಮೌನವನ್ನು ಈ ವಿಚಾರದಲ್ಲಿ ಸಹಿಸಲು ಸಾಧ್ಯವಿಲ್ಲ. ರೋಡ್‌ ಶೋ ಕುರಿತಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯಲಿದ್ದೇವೆ. ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ. ಮೋದಿ ಆಗಮನದ ವೇಳೆ ದೇಶದ ಎಲ್ಲಾ ಮಾಧ್ಯಮಗಳು ಇದನ್ನು ನೇರಪ್ರಸಾರ ಮಾಡಿವೆ, ಇದನ್ನು ಕೂಡ ಅವರ ಚುನಾವಣಾ ವೆಚ್ಚದಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಗುಜರಾತ್‌ ಬಳಿಕ ಕರುನಾಡಿನತ್ತ ಚಿತ್ತ: ಕರ್ನಾಟಕ ಗೆಲ್ಲಲು ಪ್ರಧಾನಿ ಮೋದಿಯಿಂದ ರಣತಂತ್ರ ಸಭೆ

ಮೋದಿ ತಾಯಿಯಿಂದ ಮತದಾನ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಾಗೂ ಕುಟುಂಬ ಸದಸ್ಯರು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದರು. ವೀಲ್‌ಚೇರ್‌ನಲ್ಲಿ ಆಗಮಿಸಿ ಅವರು ಮತ ಚಲಾವಣೆ ಮಾಡಿದ್ದಾರೆ.

Follow Us:
Download App:
  • android
  • ios