ಬಿಜೆಪಿಯೊಳಗಿನ ಬಂಡಾಯದ ಕಿಚ್ಚು, ಕಾಂಗ್ರೆಸ್, ಜೆಡಿಎಸ್ ಗೆ ಲಾಭ?

ಮೊದಲ ಲಿಸ್ಟ್‌ ಬಿಡುಗಡೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೆಟ್‌ ಬೆಂಕಿ ಹೊತ್ತಿಕೊಂಡಿದೆ. ಟಿಕೆಟ್‌ ಕೈತಪ್ಪಿದ್ದಕ್ಕೆ ಪಕ್ಷದಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಈ ಬಂಡಾಯ ಬಿಜೆಪಿಗೆ ಎಷ್ಟು ಕಡೆ ಗೆಲುವಿಗೆ ಮುಳ್ಳಾಗುತ್ತದೆ ಎನ್ನುವುದು ಮುಂದಿರುವ ಪ್ರಶ್ನೆಯಾಗಿದೆ.

First Published Apr 12, 2023, 10:59 PM IST | Last Updated Apr 12, 2023, 10:59 PM IST

ಬೆಂಗಳೂರು (ಏ.12): ಲಕ್ಷ್ಮಣ್‌ ಸವದಿ, ಎಸ್‌ಐ ಚಿಕ್ಕನಗೌಡರ್‌, ಆರ್‌.ಶಂಕರ್‌, ಸೊಗಡು ಶಿವಣ್ಣ... ಬಿಜೆಪಿ ಅಭ್ಯರ್ಥಿಗಳ ಮೊದಲ ಲಿಸ್ಟ್‌ ಬಿಡುಗಡೆಯಾಗುತ್ತಿದ್ದಂತೆ ಬಂಡಾಯ ಭುಗಿಲೆದ್ದಿದೆ. ಕೆಲವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರೆ, ಇನ್ನೂ ಕೆಲವರು ಅಸಮಾಧಾನದಿಂದ ಕುದಿಯುತ್ತಿದ್ದಾರೆ.

ಬಿಜೆಪಿಗೆ ಈ ಬಂಡಾಯ ಮುಂದಿನ ಚುನಾವಣೆಯಲ್ಲಿ ಎಷ್ಟು ಕಡೆ ಗೆಲುವಿಗೆ ಅಡ್ಡಿಯಾಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ನಡುವೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಬಂಡಾಯದ ಲಾಭ ಪಡೆದುಕೊಳ್ಳಲು ಮುಂದಾಗಿದೆ.

ಭಟ್ಕಳದಲ್ಲಿ ಶುರುವಾಯ್ತು ತಳಮಳ, ಜೆಡಿಎಸ್‌ನಿಂದ ಹಿರಿಯ ವಕೀಲ ನಾಗೇಂದ್ರ ನಾಯ್ಕ್‌ ಅಭ್ಯರ್ಥಿ!

ಲಕ್ಷ್ಮಣ್‌ ಸವದಿಗೆ ಕಾಂಗ್ರೆಸ್‌ ಗಾಳ ಹಾಕುತ್ತಿದ್ದರೆ, ಇನ್ನೂ ಕೆಲ ನಾಯಕರು ಜೆಡಿಎಸ್ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಕೆಲವರು ಚುನಾವಣೆಗೆ ಪಕ್ಷೇತರರಾಗಿ ನಿಲ್ಲುವ ಮೂಲಕ ಬಿಜೆಪಿ ಗೆಲುವಿಗೆ ಅಡ್ಡಿ ಪಡಿಸುವ ಇರಾದೆಯಲ್ಲಿದ್ದಾರೆ.

Video Top Stories