Asianet Suvarna News Asianet Suvarna News

ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!

ಅಳಿಯಲಿದೆಯಂತೆ ದೊಡ್ಡ-ದೊಡ್ಡ ಮಹಾನ್‌ರ ಯೋಗ..!
ಗೋಡೆಗೆ ಇದ್ದವರು ರೋಡಿಗೆ ಬರೋ ಟೈಂ ಬಂದಿದೆಯಂತೆ.!
ರಾಜಕೀಯ ಕಾರ್ಣಿಕ ಕೇಳಿದ ರಾಜಕಾರಣಿಗಳೆಲ್ಲ ಗಡಗಡ..!

ಈ ಬಾರಿ ಲೋಕಸಭಾ ಚುನಾವಣೆ(Lok Sabha elections 2024) ಜನರಲ್ಲಿ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಈ ಬಾರಿ ಗೆಲುವು ಯಾರದ್ದು ಎನ್ನುವ ವಿಚಾರ ಜನರ ತಲೆ ಚಿಟ್‌ಹಿಡಿಸಿದೆ. ಒಂದೆಡೆ ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿದ್ರೆ, ಮತ್ತೊಂದೆಡೆ ಜನರು ಫಲಿತಾಂಶ(Result) ಏನಾಗಿರಲಿದೆ ಅನ್ನೋದನ್ನ ತಿಳಿದುಕೊಳ್ಳೊಕೆ ಸಮೀಕ್ಷೆಗಳ ಮೊರೆ ಹೋಗ್ತಿದ್ದಾರೆ. ಇದರ ಜೊತೆಗೆ ಕೆಲ ಧಾರ್ಮಿಕ ಕ್ಷೇತ್ರಗಳಲ್ಲಿ ನುಡಿದ ಭವಿಷ್ಯಗಳು(Prediction) ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರಿ ಚುಕ್ಕಾಣೆ ಯಾರಿಗೆ ಅನ್ನೋದನ್ನ ಗೂಢಾರ್ಥಗಳ ಮೂಲಕ ಹೇಳಿವೆ. ಇನ್ನೇನು ಬರೋ ಜೂನ್‌4 ರಂದು ಎಲೆಕ್ಷನ್‌ ರಿಜಲ್ಟ್‌ ಅನೌನ್ಸ್ ಆಗೇ ಬಿಡುತ್ತೆ. ದಿನ ಕಳೆದಂತೆ ಚುನಾವಣೆ ರಿಜಲ್ಟ್‌ ಕುರಿತು ಜನರಲ್ಲಿ ಕುತೂಹಲ ಹೆಚ್ಚಾಗ್ತಿದೆ. ಕೆಲವರು ಮತ್ತೆ ಮೋದಿ ಪ್ರಧಾನಿ(Narendra Modi) ಗದ್ದುಗೆ ಏರ್ತಾರೆ. ಇಸ್ ಬಾರ್‌ ಚಾರ್‌ಸೋ ಪಾರ್ ಫಿಕ್ಸ್ ಅನ್ತಿದ್ದಾರೆ. ಇನ್ನು ಕೆಲವರು ಇಂಡಿಯಾ ಅಲೈನ್ಸ್‌ನತ್ತ ಬೊಟ್ಟು ಮಾಡುವ ಮೂಲಕ ಬದಲಾವಣೆ ಪಕ್ಕಾ ಎನ್ತಿದ್ದಾರೆ. ಮತ್ತೆ ಕೆಲವರು ಕಾಂಗ್ರೆಸ್‌ನ(Congress) ರಾಹುಲ್‌ಪ್ರಧಾನಿಯಾಗುವ ಕನಸು ಬಿಚ್ಚಿಡ್ತಿದ್ದಾರೆ. ಈ ಬಾರಿ ಎಲೆಕ್ಷನ್‌ನ ರಿಜಲ್ಟ್‌ಮುಂಚಿತವಾಗಿಯೇ ಹೇಳೋದು ಅಂದ್ರೆ ಅದು ಸಾಧ್ಯವಾಗದ ಮಾತು. 

ಇದನ್ನೂ ವೀಕ್ಷಿಸಿ:  ಸೀರಿಯಲ್‌ ವಿಲನ್‌ಗಳಿಬ್ಬರ ಲವ್‌ ಸ್ಟೋರಿ ಸಾವಿನಲ್ಲಿ ಅಂತ್ಯ! ಪವಿತ್ರಾ ಜೊತೆ ಚಂದುಗೆ ಅಕ್ರಮ ಸಂಬಂಧ?