Asianet Suvarna News Asianet Suvarna News

ಸೀರಿಯಲ್‌ ವಿಲನ್‌ಗಳಿಬ್ಬರ ಲವ್‌ ಸ್ಟೋರಿ ಸಾವಿನಲ್ಲಿ ಅಂತ್ಯ! ಪವಿತ್ರಾ ಜೊತೆ ಚಂದುಗೆ ಅಕ್ರಮ ಸಂಬಂಧ?

ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಸಾವಿಗೀಡಾದ ಬೆನ್ನಲ್ಲೇ ನಟ ಚಂದ್ರಕಾಂತ್‌ ತೆಲಂಗಾಣದ ಮಣಿಕೊಂಡದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪವಿತ್ರಾ ಜಯರಾಂ ಸಾವಿನ ಬೆನ್ನಲೆ ನಟ ಚಂದ್ರಕಾಂತ್(Chandrakanth) ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ.ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಲೇಟೆಸ್ಟ್‌ ಪೋಸ್ಟ್‌ ವೈರಲ್ ಆಗಿದೆ. ಪವಿತ್ರಾ ಜಯರಾಂ ಮೇ.12ರಂದು ರಸ್ತೆ ಅಪಘಾತದಲ್ಲಿ(Accident) ನಿಧನರಾಗಿದ್ದರು. ಅವರ ಜೊತೆ ಕಾರಿನಲ್ಲಿ ಗೆಳೆಯ ಚಂದ್ರಕಾಂತ್‌ ಪ್ರಯಾಣ ಮಾಡುತ್ತಿದ್ದರು. ಗೆಳತಿ ಪವಿತ್ರಾ(Pavithra Jayaram) ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ತೆಲಂಗಾಣದ ಮಣಿಕೊಂಡದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಚಂದು ಮತ್ತು ಪವಿತ್ರಾ 'ತ್ರಿನಯನಿ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದರು. ಚಂದ್ರಕಾಂತ್‌ 2015ರಲ್ಲಿ ಶಿಲ್ಪಾ ಎಂಬುವವರನ್ನು ಮದುವೆ ಮಾಡಿಕೊಂಡಿದ್ದರು. ಮಾಹಿತಿಗಳ ಪ್ರಕಾರ ಚಂದ್ರಕಾಂತ್‌ಗೆ ಇಬ್ಬರು ಮಕ್ಕಳಿದ್ದರು. ಪವಿತ್ರಾ ಜಯರಾಂ ಜೊತೆ ಕ್ಲೋಸ್ ಆಗುತ್ತಿದ್ದಂತೆ ಫ್ಯಾಮಿಲಿಯನ್ನು ದೂರ ಮಾಡಿಕೊಂಡರು ಎನ್ನುವ ಮಾತುಗಳಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಸೋಮಪ್ರದೋಷ ಪೂಜೆ ಮಾಡುವುದರಿಂದ ದೊರೆಯುವ ಫಲವೇನು ಗೊತ್ತಾ?