Asianet Suvarna News Asianet Suvarna News

ಕಾಲಭೈರವನಿಗೆ 3 ಅಮಾವಾಸ್ಯೆ ಪೂಜೆ ಮಾಡಿ ಸಿಎಂ ಆಗಿದ್ದ ಎಚ್‌ಡಿಕೆ! ಸಿಎಂ ಪಟ್ಟಕ್ಕಾಗಿ ಪೂಜೆ ಮೊರೆ ಹೋದರಾ ಡಿಕೆಶಿ?

ದೊಡ್ಡಗೌಡರು, ಕುಮಾರಣ್ಣನ ಹಾದಿಯಲ್ಲಿ ಕನಕಪುರ ಬಂಡೆ..!
ಸಿಎಂ ಕುರ್ಚಿಗೆ ಆದಿಚುಂಚನಗಿರಿ ಕಾಲಭೈರವನ ಮೊರೆ ಹೋದ ಡಿಕೆಶಿ..!
ದಳಪತಿಗೆ ಒಲಿದಿದ್ದ ಕಾಲಭೈರವ ಕಾಂಗ್ರೆಸ್ ಅಧಿಪತಿಗೂ ಒಲಿತಾನಾ..? 

ಬೆಂಗಳೂರು (ಮಾ.23): ಕಳೆದ 30 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಆರು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ. ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದ ಪ್ರಮುಖ ಹುದ್ದೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಕಾಲಭೈರವನ ಮೊರೆ ಹೋಗಿದ್ದವರಿಗೆ ಸಿಕ್ಕಿದ್ದೆಂಥಾ ಶಕ್ತಿ..? ದೇವೇಗೌಡರು,, ಕುಮಾರಸ್ವಾಮಿಗೆ ಒಲಿದಿದ್ದ ಕಾಲಭೈರವ ಡಿಕೆಶಿಗೂ ಅನುಗ್ರಹಿಸ್ತಾನಾ..? 3 ಅಮಾವಾಸ್ಯೆ ಪೂಜೆ ಮಾಡಿದ್ರೆ ಕನಕುಪುರ ಬಂಡೆ ಮುಖ್ಯಮಂತ್ರಿಯಾಗೋದು ಪಕ್ಕಾನಾ..? ಏನಿದು ಕಾಲಗರ್ಭದಲ್ಲಿ ಅಡಗಿ ಕೂತಿರೋ ಕಾಲಭೈರವನ ಶಕ್ತಿ ರಹಸ್ಯ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರೋ ಡಿಕೆ ಶಿವಕುಮಾರ್, ರಾಜಕೀಯ ಪಟ್ಟುಗಳನ್ನು ಹಾಕ್ತಿದ್ದಾರೆ. ಜೊತೆಗೆ ದೇವರಿಗೆ ಮೊರೆ ಇಡುತ್ತಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಡಿಕೆಶಿ ಸಿಎಂ ಆಗೋದು ಗ್ಯಾರಂಟಿನಾ..? ಮುಖ್ಯಮಂತ್ರಿ ಕುರ್ಚಿಯಾಗಿ ಕನಕಪುರ ಬಂಡೆ ಹಾಕ್ತಿರೋ ಪಟ್ಟುಗಳು ಮಾತ್ರ ಭಾರಿ ಹಿಡಿತವಾಗಿವೆ. ಕಾಲಭೈರವನಿಗೆ ಅಮಾವಾಸ್ಯೆ ಪೂಜೆ ಮಾಡಿದ್ದ ದೇವೇಗೌಡರು ದೇಶದ ಪ್ರಧಾನಿಯಾದರು. ಇನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅದೇ ಹಾದಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಜ್ಜೆ ಹಾಕ್ತಿದ್ದಾರೆ.