ಪ್ರಾದೇಶಿಕ ಪಕ್ಷಗಳತ್ತ ಕೇಸರಿ ಪಡೆ ಚಿತ್ತ: ಎನ್‌ಡಿಎ ಜೊತೆ ಹೋಗುತ್ತಾ ಜೆಡಿಎಸ್ ?
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಜೊತೆ ಬಿಜೆಪಿ ಕೈ ಜೋಡಿಸಲಿದೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ.
ವಿರೋಧಿಗಳು ಒಟ್ಟಾದ ಹಿನ್ನೆಲೆ ಎನ್‌ಡಿಎ(NDA) ಸಹ ಸಭೆ ನಡೆಸಲು ಮುಂದಾಗಿದೆ. ಹಳೇ ದೋಸ್ತಿಗಳ ಜೊತೆ ಹೊಸ ಮಿತ್ರರನ್ನು ಹುಡುಕಲು ಎನ್‌ಡಿಎ ಪ್ರಯತ್ನಿಸುತ್ತಿದೆ. ಇದೀಗ ರಾಜ್ಯದಲ್ಲಿ ಜೆಡಿಎಸ್(JDS) ಎನ್‌ಡಿಎ ಟೀಮ್ ಸೇರಿಕೊಳ್ಳುತ್ತಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರು(Devegowda) ಒಪ್ಪಿಗೆ ಕೊಡುತ್ತಾರಾ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಜೂನ್ 23ರ ಮಹಾಘಟಬಂಧನ್ ಸಭೆ(Mahaghatabandhan meeting) ಬಳಿಕ ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಸಭೆ ನಡೆಸಲಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇದ್ದು, ಈ ವೇಳೆ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಲಿದೆ ಎನ್ನಲಾಗ್ತಿದೆ. ಇದಕ್ಕಾಗಿ ಜೆಡಿಎಸ್ ಕಾರ್ಯಕರ್ತರ ಮನವೊಲಿಸುವ ಅಗತ್ಯ ಸಹ ಇದೆ. ಜೆಡಿಎಸ್ ಒಂದು ವೇಳೆ ಒಂಟಿಯಾಗಿ ಚುನಾವಣೆಯಲ್ಲಿ ಸ್ಫರ್ಧಿಸಿದ್ರೆ, ಸೋಲನ್ನು ಅನುಭವಿಸುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಲಿವ್ ಇನ್ ರಿಲೇಶನ್‌ಶಿಪ್‌ನಿಂದ ಮಹಿಳೆಯರಿಗೆ ಕುತ್ತು: ಆಘಾತಕಾರಿ ಮಾಹಿತಿ ನೀಡಿದ ವಿಕ್ಟೋರಿಯಾ ವೈದ್ಯರು ?