ಲಿವ್ ಇನ್ ರಿಲೇಶನ್‌ಶಿಪ್‌ನಿಂದ ಮಹಿಳೆಯರಿಗೆ ಕುತ್ತು: ಆಘಾತಕಾರಿ ಮಾಹಿತಿ ನೀಡಿದ ವಿಕ್ಟೋರಿಯಾ ವೈದ್ಯರು ?
ಲಿವ್ ಇನ್ ರಿಲೇಶನ್‌ಶಿಪ್‌ನಿಂದ ದೌರ್ಜನ್ಯಗಳು ಹೆಚ್ಚಳವಾಗುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನೀಡಿದ್ದಾರೆ.
ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಿಂದ( live in relationship) ಕೌಟುಂಬಿಕ ದೌರ್ಜನ್ಯ (Domestic violence) ಹೆಚ್ಚಳವಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಯೊಂದನ್ನು ವಿಕ್ಟೋರಿಯಾ ಆಸ್ಪತ್ರೆ( Victoria Hospital) ವೈದ್ಯರು ನೀಡಿದ್ದಾರೆ. ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೆಚ್ಚಿನ ಮಹಿಳೆಯರಲ್ಲಿ ಸುಟ್ಟ ಗಾಯಕ್ಕೆ ಕೌಟುಂಬಿಕ ಹಿಂಸಾಚಾರವೇ ಕಾರಣವಾಗಿದೆ. ಹೆಚ್ಚಾಗಿ 20 ರಿಂದ 30 ವರ್ಷದೊಳಗಿನ ಮಹಿಳೆಯರು(Women) ದೌರ್ಜನಕ್ಕೆ ಗುರಿಯಾಗುತ್ತಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಹೀಗೆ ಬರುವ 708 ಮಹಿಳೆಯರಲ್ಲಿ 218 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರಾದ ಡಾ.ರಮೇಶ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್ ಮೇಲೆ ಶಾಕ್..!: ಆರಂಭದಲ್ಲಿ ಸಲ್ಲಿಸಿದ್ದ ಅರ್ಜಿಗಳಲ್ಲಿ ತಾಂತ್ರಿಕ ದೋಷ ?