News Hour: ಸೋನಿಯಾ ಗಾಂಧಿಗೆ ಬೈದ ನೀವೇ ಇಂದು ಅವರ ಕಾಲ ಕೆಳಗೆ ಕುಳಿತಿಲ್ವಾ, ಸಿದ್ದುಗೆ ಜಿಟಿಡಿ ಟಾಂಗ್!
2018ರ ಚಾಮುಂಡೇಶ್ವರಿ ಚುನಾವಣೆಯ ಸೋಲನ್ನು ನೆನಪಿಸಿಕೊಂಡು, ಕೆಲಸಕ್ಕೆ ಬಾರದವರನ್ನು ಆಯ್ಕೆ ಮಾಡಿದ್ದೀರಿ ಎಂದಿದ್ದ ಸಿಎಂ ಸಿದ್ಧರಾಮಯ್ಯ ವಿರುದ್ಧ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹರಿಹಾಯ್ದಿದ್ದಾರೆ.
ಬೆಂಗಳೂರು (ಸೆ.1): ಕೆಲಸಕ್ಕೆ ಬಾರದವರನ್ನು ಚಾಮುಂಡೇಶ್ವರಿಯಲ್ಲಿ ಆಯ್ಕೆ ಮಾಡಿದ್ದೀರಿ ಎನ್ನುವ ಸಿಎಂ ಸಿದ್ಧರಾಮಯ್ಯ ಅವರ ಮಾತಿಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್‌ನ ಸೀಮೆ ಎಣ್ಣೆ ಪಾರ್ಟಿ ಎಂದಿದ್ದ ನೀವು ಈಗ ಯಾರ ಕೆಳಗಿದ್ದೀರಿ ಅನ್ನೋದನ್ನ ನೆನಪು ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ನಾನು ಐದು ಬಾರಿ ಗೆದ್ದಿದ್ದೇನೆ. ನೀವು ರಾಜಶೇಖರ ಮೂರ್ತಿ ಮತ್ತೆ ನನ್ನ ವಿರುದ್ಧ ಸೋತಿದ್ದೀರಿ. 2013ರಲ್ಲಿ ನನ್ನನ್ನು ಸೋಲಿಸಲು ಬಂದಿದ್ದೀರಿ. ಆಗ ನಿಮಗೆ ಸಾಧ್ಯವಾಯ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ನೀವೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಬೈದಿಲ್ವಾ? ಆಕೆಗೆ ಭಾರತೀಯ ಪೌರತ್ವ ನೀಡಲೇಬಾರದು ಎಂದಿದ್ದೀರಿ. ಈಗ ನೀವು ಯಾರ ಕಾಲ ಕೆಳಗೆ ಇದ್ದೀರಿ ಅನ್ನೋದನ್ನು ನೋಡಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.
ನನ್ನನ್ನು ಬಿಟ್ಟು ಕೆಲಸಕ್ಕೆ ಬಾರದವರನ್ನ ಚಾಮುಂಡೇಶ್ವರಿಯಲ್ಲಿ ಗೆಲ್ಲಿಸಿದವರು ನೀವು: ಸಿಎಂ ಸಿದ್ಧರಾಮಯ್ಯ
1983ರಲ್ಲಿ ನಿಮ್ಮನ್ನು ಗೆಲ್ಲಿಸಿದ ಸಮುದಾಯ ಯಾವುದು ಅನ್ನೋದನ್ನು ನೆನಪು ಮಾಡಿಕೊಳ್ಳಿ. ಆದರೆ, ಅಂದು ನೀವು ಗೆಲ್ಲಿಸಿದವರ ಹೆಸರನ್ನೂ ಹೇಳಲಿಲ್ಲ. ನೆನಪೂ ಮಾಡಿಕೊಳ್ಳಲಿಲ್ಲ.ಈಗ ಸಿಎಂ ಆಗಿದ್ದೀರಿ. ಯಾರಿಗೂ ಅಗೌರವ ತೋರಬೇಡಿ. ನಾನು ನಾಯಕನೇ ಸುಮ್ಮನೆ ಏಕವಚನದಲ್ಲಿ ಮಾತನಾಡುವ ಅಭ್ಯಾಸ ಮಾಡಿಕೊಳ್ಳಬೇಡಿ ಎಂದು ಟೀಕಿಸಿದ್ದಾರೆ.