ನನ್ನನ್ನು ಬಿಟ್ಟು ಕೆಲಸಕ್ಕೆ ಬಾರದವರನ್ನ ಚಾಮುಂಡೇಶ್ವರಿಯಲ್ಲಿ ಗೆಲ್ಲಿಸಿದವರು ನೀವು: ಸಿಎಂ ಸಿದ್ಧರಾಮಯ್ಯ
ಮುಖ್ಯಮಂತ್ರಿ ಸಿದ್ಧರಾಮಯ್ಯ2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಎದುರಾದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಕೆಲಸ ಮಾಡಿದ ನನ್ನನ್ನು ಸೋಲಿಸಿ ಕೆಲಸಕ್ಕೆ ಬಾರದವರನ್ನು ಅಲ್ಲಿ ಗೆಲ್ಲಿಸಿದವರು ನೀವು ಎಂದು ಹೇಳಿದ್ದಾರೆ.
ಬೆಂಗಳೂರು (ಆ.31): ಸಿಎಂ ಸಿದ್ಧರಾಮಯ್ಯ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎದುರಾದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಹಾಲಿ ಸಿಎಂ ಆಗಿ ಕಣಕ್ಕಿಳಿದಿದ್ದ ಸಿದ್ಧರಾಮಯ್ಯ ಅಂದು ಜೆಡಿಎಸ್‌ನ ಜಿಟಿ ದೇವೇಗೌಡ ವಿರುದ್ಧ ಸೋಲು ಕಂಡಿದ್ದರು. ಸೋಲುವ ಸೂಚನೆ ಇದ್ದ ಕಾರಣಕ್ಕೆ ಕೊನೆ ಕ್ಷಣದಲ್ಲಿ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದರು.
ಚಾಮುಂಡೇಶ್ವರಿಯಲ್ಲಿ ನಾನು ಕೆಲಸ ಮಾಡಿದ್ದೆ ಆದರೆ, ಇಲ್ಲಿ ನೀವು ನನ್ನನ್ನು ಸೋಲಿಸಿದಿರಿ. ಯಾರೋ ಕೆಲಸಕ್ಕೆ ಬಾರದವರನ್ನು ಇಲ್ಲಿ ಗೆಲ್ಲಿಸಿದಿರಿ ಎಂದು ಜಿಟಿ ದೇವೇಗೌಡ ವಿರುದ್ಧ ನೇರವಾಗಿಯೇ ಹರಿಹಾಯ್ದುರು. ಸೋಲಿನ ಸೂಚನೆ ಇದ್ದ ಕಾರಣಕ್ಕಾಗಿಯೇ ದೂರದ ಬಾದಾಮಿಯಲ್ಲಿ ಹೋಗಿ ಸ್ಪರ್ಧೆ ಮಾಡಬೇಕಾಯಿತು ಎಂದಿದ್ದಾರೆ.
ಈ ಬಾರಿ ಪ್ರತಾಪ್ ಸಿಂಹನನ್ನು ದಯವಿಟ್ಟು ಗೆಲ್ಲಿಸಬೇಡಿ: ಸಿದ್ದರಾಮಯ್ಯ ಮನವಿ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹನನ್ನು ಸೋಲಿಸಿ ಎಂದು ಸಿಎಂ ಸಿದ್ಧರಾಮಯ್ಯ ಇದೇ ವೇಳೆ ಮನವಿ ಮಾಡಿದ್ದಾರೆ. ಇಲ್ಲಿ ಪ್ರತಾಪ್ ಸಿಂಹನನ್ನು ಕೇಂದ್ರದಲ್ಲಿ ನರೇಂದ್ರ ಮೋದಿಯನ್ನು ಸೋಲಿಸಬೇಕಾಗಿದೆ ಎಂದು ಹೇಳಿದ್ದಾರೆ.