News Hour: ಕೊನೆಗೂ ವರ್ಗಾವಣೆ ದಾಖಲೆ ಬಿಡುಗಡೆ ಮಾಡಿದ ಕುಮಾರಸ್ವಾಮಿ!

ಇಲ್ಲಿಯವರೆಗೂ ಸರ್ಕಾರದ ದಂಧೆಗೆ ಪೆನ್‌ಡ್ರೈವ್‌ನಲ್ಲಿ ಸಾಕ್ಷ್ಯ ಇದೆ ಎನ್ನುತ್ತಿದ್ದ ಎಚ್‌ಡಿ ಕುಮಾರಸ್ವಾಮಿ, ಬುಧವಾರ ಸದನದಲ್ಲಿ ಈ ಕುರಿತಾದ ದಾಖಲೆಯನ್ನೇ ಬಿಡುಗಡೆ ಮಾಡಿದೆ. ಸರ್ಕಾರ ವರ್ಗಾವಣೆಗೆ ಎಷ್ಟೆಷ್ಟು ರೇಟ್‌ ಫಿಕ್ಸ್‌ ಮಾಡಿದೆ ಎನ್ನುವ ಮಾಹಿತಿ ಅದರಲ್ಲಿದೆ.
 

First Published Jul 12, 2023, 11:19 PM IST | Last Updated Jul 12, 2023, 11:19 PM IST

ಬೆಂಗಳೂರು (ಜು.12): ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ವರ್ಗಾವಣೆ ಕುರಿತಾದ ಎರಡು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ವರ್ಗಾವಣೆ ಡೀಲ್‌ಗೆ ಕೋಟಿ ಕೋಟಿ ಲಂಚದ ಆರೋಪವನ್ನು ಮಾಡಿದ್ದಾರೆ.

ಸರ್ಕಾರದ ವಿರುದ್ಧ ಅಕ್ಷರಶಃ ಮುಗಿಬಿದ್ದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆನ್ನು ಬೆನ್ನಿಗೆ ಆರೋಪಗಳು ಮಾಡಿದ್ದಾರೆ. ಪ್ರತಿ ಬಾರಿಯೂ ಸಾಕ್ಷ್ಯ ನೀಡಿ ಎನ್ನುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ ಬುಧವಾರ ಅಚ್ಚರಿ ಎನ್ನುವಂತೆ ಎಚ್‌ಡಿಕೆ ದಾಖಲೆಯನ್ನು ನೀಡಿ ವರ್ಗಾವಣೆಯ ಬಾಂಬ್‌ ಎಸೆದಿದ್ದಾರೆ.

ಕ್ರಿಮಿನಲ್‌ಗಳಿಗೆ ಕರ್ನಾಟಕ ಸ್ವರ್ಗವಾಗುತ್ತಿದೆ, ರಾಜ್ಯ ಸರ್ಕಾರದ ವಿರುದ್ಧ ರಾಜೀವ್‌ ಚಂದ್ರಶೇಖರ್‌ ಆಕ್ರೋಶ!

ಇನ್ನೊಂದೆಡೆ ಬಿಜೆಪಿ ತನ್ನ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರೋದು ಕಾಂಗ್ರೆಸ್‌ ಪಾಲಿಗೆ ಲೇವಡಿಯ ಅಸ್ತ್ರವಾದಂತಾಗಿದೆ. ಸದನಲ್ಲಿ ಬಿಜೆಪಿ ನಾಯಕರು ಮಾತನಾಡಲು ಎದ್ದಾಗಲೆಲ್ಲಾ, ಸಿಎಂ ಸೇರಿದಂತೆ ಕಾಂಗ್ರೆಸ್‌ ನಾಯಕರು ಇದೇ ವಿಚಾರವನ್ನು ಹಿಡಿದುಕೊಂಡು ತಿವಿಯುತ್ತಿದ್ದಾರೆ.