ಜೈನಮುನಿ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಪದೇ ಪದೇ ಪ್ರತಿಭಟನೆ ಮಾಡಿದ ಬಳಿಕವೇ ರಾಜ್ಯ ಪೊಲೀಸರು ಈ ವಿಷಯದಲ್ಲಿ ಕ್ರಮಕೈಗೊಂಡಿದ್ದಾರೆ ಎಂದು ಕರ್ನಾಟಕದ ರಾಜ್ಯಸಭಾ ಸಂಸದರೂ ಆಗಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. 

ನವದೆಹಲಿ (ಜು.12): ಬೆಳಗಾವಿಯಲ್ಲಿ ನಡೆದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಭೀಕರ ಹಾಗೂ ಅಮಾನವೀಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕವು ಕೋಮುವಾದಿಗಳು ಮತ್ತು ಕ್ರಿಮಿನಲ್‌ಗಳಿಗೆ 'ಸುರಕ್ಷಿತ ಸ್ವರ್ಗ' ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯು ಸದನದ ಒಳಗೆ ಹಾಗೂ ಸದನದ ಹೊರಗೆ ಪ್ರತಿಭಟನೆ ಮಾಡಿದ ಬಳಿಕವಷ್ಟೇ ರಾಜ್ಯದ ಪೊಲೀಸರು ಈ ಪ್ರಕರಣದಲ್ಲಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರ ಕಾಂಗ್ರೆಸ್‌ ಸರ್ಕಾರದ ಅಡಿಯಲ್ಲಿ ಕರ್ನಾಕಟಕವು ಕೆಲವೇ ತಿಂಗಳಲ್ಲಿ ಕೋಮುವಾದಿ ಮತ್ತು ಅಪರಾಧಿಗಳಿಗೆ ಸುರಕ್ಷಿತ ತಾಣವಾಗಿ ಬದಲಾಗಿದೆ ಎಂದ ಅವರು, ಜೈನ ಮುನಿಯ ಬರ್ಬರ ಹತ್ಯೆ ಆಘಾತಕಾರಿಯಾದದ್ದು ಎಂದಿದ್ದಾರೆ. ಭಾರತೀಯ ಜನತಾ ಪಾರ್ಟಿ ನಡೆಸಿದ ಸಾಕಷ್ಟು ನಿರಂತರ ಪ್ರತಿಭಟನೆಗಳ ಬಳಿಕವೇ ರಾಜ್ಯ ಪೊಲೀಸರು ಈ ಕುರಿತಾಗಿ ಕ್ರಮ ಕೈಗೊಂಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರ ಮರಳಿ ಸ್ಥಾಪನೆ ಮಾಡಿದ್ದ ಕಾನೂನು ಸುವ್ಯವಸ್ಥೆ ಈಗ ಏನಾಯ್ತು ಎನ್ನುವ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳಬೇಕಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಹಲವಾರು ಅಪರಾಧ ಘಟನೆಗಳನ್ನು ಉಲ್ಲೇಖಿಸಿದ ರಾಜೀವ್‌ ಚಂದ್ರಶೇಖರ್, ಇದು ಪಟ್ಟಭದ್ರ ಹಿತಾಸಕ್ತಿಗಳ ಕೃತ್ಯವಾಗಿದೆ ಎಂದು ಹೇಳಿದರು. ಏಕೆಂದರೆ ನಿರ್ದಿಷ್ಟ ಧರ್ಮ ಅಥವಾ ನಂಬಿಕೆಯೊಂದಿಗೆ ಸಂಬಂಧ ಹೊಂದಿರುವ ಜನರು ಗುರಿಯಾಗುವವರೆಗೆ ಕರ್ನಾಟಕ ಸುರಕ್ಷಿತ ಸ್ವರ್ಗ ಎಂದು ಅವರು ಭಾವಿಸುತ್ತಿರಬೇಕು ಎಂದಿದ್ದಾರೆ. ರಾಜ್ಯವು ಇಂತಹ ಕ್ರೂರ ಮತ್ತು ಹಿಂಸಾತ್ಮಕ ಅಪರಾಧಗಳ ಕೇಂದ್ರವಾಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ ಎಂದು ಆರೋಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಕಾಣೆಯಾಗಿದ್ದ ಜೈನ ಮುನಿ ಬರ್ಬರ ಹತ್ಯೆ: ಇಬ್ಬರ ಬಂಧನ, ಸಿಗದ ಮೃತದೇಹ

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ಮಠದ ಜೈನ ಸನ್ಯಾಸಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ತುಂಡು ತುಂಡಾಗಿ ಕತ್ತರಿಸಿ, ಛಿದ್ರಗೊಂಡ ದೇಹದ ಭಾಗಗಳನ್ನು ನಿಷ್ಕ್ರಿಯಗೊಂಡ ಬೋರ್‌ವೆಲ್‌ಗೆ ಎಸೆಯಲಾಗಿತ್ತು. ಪ್ರಕರಣದಲ್ಲಿ ನಾರಾಯಣ ಬಸಪ್ಪ ಮಡಿ ಮತ್ತು ಹಾಸನದ ದಲಾಯತ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಕೊಲೆಯ ಹಿಂದೆ ಹಣದ ಸಂಬಂಧವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಳಗಾವಿ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು