ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ ಮ್ಯಾಜಿಕ್‌: ಈ ಬಾರಿ ಜೆಡಿಎಸ್‌ಗೆ ಹಬ್ಬವೋ ಹಬ್ಬ !

ಬೇರೆ ಪಕ್ಷಗಳ ಬಂಡಾಯ ನಾಯಕರಿಗೆ ಜೆಡಿಎಸ್ ಟಿಕೆಟ್‌
ರಾಷ್ಟ್ರೀಯ ಪಕ್ಷಗಳ ಬದಲಾವಣೆಯಿಂದ ಜೆಡಿಎಸ್‌ಗೆ ಲಕ್‌
ಅನ್ಯ ಪಕ್ಷದ ನಾಯಕರಿಗೆ ರೆಡ್‌ ಕಾರ್ಪೆಟ್‌ ಹಾಕಿದ ಜೆಡಿಎಸ್‌

Share this Video
  • FB
  • Linkdin
  • Whatsapp

ರಾಷ್ಟ್ರೀಯ ಪಕ್ಷಗಳ ಬದಲಾವಣೆಯ ಮ್ಯಾಜಿಕ್‌ ಇದೀಗ ಜೆಡಿಎಸ್‌ಗೆ ಲಕ್‌ ಆಗಿ ಪರಿಣಮಿಸಿದಂತೆ ಕಾಣುತ್ತಿದೆ. ಅನ್ಯ ಪಕ್ಷದ ಪ್ರಬಲ ನಾಯಕರನ್ನು ಕರೆಸಿ, ಜೆಡಿಎಸ್‌ ಟಿಕೆಟ್‌ನನ್ನು ನೀಡುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ನಾಯಕರು ಜೆಡಿಎಸ್‌ ಟಿಕೆಟ್‌ ಪಡೆಯುತ್ತಿದ್ದಾರೆ. ಇದರಿಂದ ಜೆಡಿಎಸ್‌ಗೆ ಆನೆಬಲ ಬಂದಂತೆ ಆಗಿದೆ. ಎಂ.ಪಿ. ಕುಮಾರಸ್ವಾಮಿ, ವೈ.ಎಸ್.ವಿ ದತ್ತ. ಗುರು ಚರಣ್‌, ಆಯನೂರು ಮಂಜುನಾಥ್‌, ಅನಿಲ್‌ ಲಾಡ್‌, ಎ.ಬಿ. ಮಾಲಕರೆಡ್ಡಿ ಸೇರಿದಂತೆ ಅನೇಕರಿಗೆ ಜೆಡಿಎಸ್‌ ಟಿಕೆಟ್‌ನನ್ನು ಕೊಡಲಾಗಿದೆ. ಈ ಬಾರೀಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿದ್ದರಿಂದ, ಹಲವು ಹಿರಿಯ ನಾಯಕರು ಬಂಡಾಯ ಎಂದಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ: ಶಿವಮೊಗ್ಗದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ...ಈ ಬಾರಿ ಶಿವಮೊಗ್ಗದಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?

Related Video