ಬಿಜೆಪಿಯ 10 ಶಾಸಕರು ಅಮಾನತು: ಇಂದು ಪ್ರತಿಭಟನೆ ಮುಂದುವರೆಯುವ ಸಾಧ್ಯತೆ
ಬಿಜೆಪಿಯ ಹತ್ತು ಶಾಸಕರನ್ನು ಸದನದಿಂದ ಸಸ್ಪೆಂಡ್ ಮಾಡಿರುವುದನ್ನು ಖಂಡಿಸಿ, ಇಂದು ಸಹ ಪ್ರತಿಭಟನೆ ಮುಂದುವರೆಯುವ ಸಾಧ್ಯತೆ ಇದೆ.
ಬೆಂಗಳೂರು: ಸದನದಲ್ಲಿ ಸ್ಪೀಕರ್‌ಗೆ ಕಾಗದವನ್ನು ಎಸೆದಿದ್ದಕ್ಕೆ ಬಿಜೆಪಿಯ(BJP) 10 ಶಾಸಕರನ್ನು ಅಮಾನತು ಮಾಡಲಾಗಿದೆ. ಇದನ್ನು ಖಂಡಿಸಿ ಬಿಜೆಪಿ ಬುಧವಾರ ಪ್ರತಿಭಟನೆ(Protest) ನಡೆಸಿತ್ತು. ಈ ಪ್ರತಿಭಟನೆ ಇಂದು ಸಹ ಮುಂದುವರೆಯುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ(Meeting) ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ತೀರ್ಮಾನಗಳ ಬಗ್ಗೆ ಶಾಸಕರು ಚರ್ಚಿಸುವ ಸಾಧ್ಯತೆ ಇದೆ. ಮುಂದಿನ ಹೋರಾಟದ ಬಗ್ಗೆ ಶಾಸಕರಿಂದ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಈ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(Former CM BS Yeddyurappa) ಮಾತನಾಡಿದ್ದು, ವಿರೋಧ ಪಕ್ಷವನ್ನು(Opposition party) ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಬಾರದು. ಇದು ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ. ಶಾಸಕರ ಮೇಲೆ ಕ್ರಮಕೈಗೊಳ್ಳುವ ಕೆಲಸವನ್ನು ಸ್ಫೀಕರ್ ಮಾಡಬಾರದಿತ್ತು. ಇನ್ನಾದರೂ ಇದನ್ನು ಸರಿಪಡಿಸಿಕೊಂಡು ಹೋಗುವುದು ಒಳ್ಳೆಯದು ಎಂದು ಬಿಎಸ್‌ವೈ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರ ಸ್ಕೆಚ್: ಇವರ ಟ್ರೈನಿಂಗ್ ಸೆಂಟರ್ ಯಾವುದು ಗೊತ್ತಾ..?