Asianet Suvarna News Asianet Suvarna News

ನೀರು ಕೊಡಿ ಸ್ವಾಮಿ ಅಂದ್ರೆ **** ಎಂದು ರೈತರಿಗೆ ಅವಾಜ್ ಹಾಕಿದ ಮಾಧುಸ್ವಾಮಿ..!

 ಕಾನೂನು ಸಚಿವ ಮಾಧುಸ್ವಾಮಿ ಮತ್ತೆ ಪದೇ ಪದೇ ನಾಲಿಗೆ ಹರಿಬಿಡುತ್ತಿದ್ದಾರೆ.  ನೀರು ಕೇಳಿದ ರೈತರಿಗೆ ಅವ್ಯಾಚ್ಯ ಶಬ್ಧದಲ್ಲಿ ನಿಂದಿಸಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ‌ ಗ್ರಾಮವೊಂದರಲ್ಲಿ ನಡೆದಿದೆ.  

ತುಮಕೂರು (ಜ. 17:  ಕಾನೂನು ಸಚಿವ ಮಾಧುಸ್ವಾಮಿ ಮತ್ತೆ ಪದೇ ಪದೇ ನಾಲಿಗೆ ಹರಿಬಿಡುತ್ತಿದ್ದಾರೆ.  ನೀರು ಕೇಳಿದ ರೈತರಿಗೆ ಅವ್ಯಾಚ್ಯ ಶಬ್ಧದಲ್ಲಿ ನಿಂದಿಸಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ‌ ಗ್ರಾಮವೊಂದರಲ್ಲಿ ನಡೆದಿದೆ.  

ಭಾರತದ ಲಸಿಕೆ ಮೇಲೆ ಜಗತ್ತೇ ಇಟ್ಟಿದೆ ನಂಬಿಕೆ, ಜನರಿಗೆ ಬೇಡ ಅಂಜಿಕೆ..!

'ನೀರು ಕೊಡಿ ಸ್ವಾಮಿ' ಎಂದು ರೈತರೊಬ್ಬರು ಕೇಳಿದ್ದಕ್ಕೆ  'ನೀರನ್ನ ಬಿಡ್ಸಯ್ಯ ಅದ್ಯಾರ್ ಕೈಲಿ‌ ಬಿಡಿಸ್ತಿರಾ ನಾನು ನೋಡ್ತಿನಿ,  ಯಾವಾನಾದ್ರು *** ನನ್ಮಗ ಬಂದ್ ಕೇಳಿದಿರಾ..? ಇಲ್ಲೊಬ್ಬ ಎಂಎಲ್‌ಎ ಇದಾನೆ ಅಂತ ಕೇಳಿದಿರೇನ್ರಿ.? ಎಂದು ಅವಾಜ್ ಹಾಕಿ ಕಳ್ಸಿದಾರೆ. ಸಚಿವರಾಗಿ ಸಾರ್ವಜನಿಕರ ಜೊತೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. 

Video Top Stories