ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಫುಲ್ ಆಕ್ಟಿವ್, ಬಿಜೆಪಿ ನಾಯಕರು ಜನಾರ್ದನ ರೆಡ್ಡಿ ಪಕ್ಷಕ್ಕೆ ಸೇರ್ಪಡೆ

ನೂತನ ಪಕ್ಷದ ಸಂಘಟನೆಗೆ ಒತ್ತು ಕೊಡುತ್ತಿರುವ ಜನಾರ್ದನ ರೆಡ್ಡಿ, ಜ.6 ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಲೋಗೋ ಅನಾವರಣ ಮಾಡಲಿದ್ದಾರೆ. ಬಳ್ಳಾರಿ ಸಮಾವೇಶಕ್ಕೂ ಮುನ್ನ ಸಿಂಧನೂರಿನಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜನೆ. 

Share this Video
  • FB
  • Linkdin
  • Whatsapp

ಬಳ್ಳಾರಿ(ಡಿ.29):  ಹೊಸ ಪಕ್ಷ ಘೋಷಣೆ ಬಳಿಕ ಜನಾರ್ದನ ರೆಡ್ಡಿ ಫುಲ್ ಆಕ್ಟಿವ್ ಆಗಿದ್ದಾರೆ. ಹೌದು, ನೂತನ ಪಕ್ಷದ ಸಂಘಟನೆಗೆ ಜನಾರ್ದನ ರೆಡ್ಡಿ ಒತ್ತು ಕೊಡುತ್ತಿದ್ದಾರೆ. ಜ.6 ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಲೋಗೋ ಅನಾವರಣ ಮಾಡಲಿದ್ದಾರೆ. ಬಳ್ಳಾರಿ ಸಮಾವೇಶಕ್ಕೂ ಮುನ್ನ ಸಿಂಧನೂರಿನಲ್ಲಿ ಬೃಹತ್‌ ಕಾರ್ಯಕ್ರಮವೊಂದನ್ನ ಆಯೋಜನೆ ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿ ನೂತನ ಪಕ್ಷದ ಲೋಗೋ, ಧ್ವಜ, ಶಾಲು ಲಾಂಚ್‌ ಮಾಡಲಿದ್ದಾರೆ. ಜ.11 ರಂದು ಬಳ್ಳಾರಿಯಲ್ಲಿ ಬೃಹತ್‌ ರಾಜಕೀಯ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ. ಆ ಸಮಾವೇಶದಲ್ಲಿ ಹಲವು ಬಿಜೆಪಿ ನಾಯಕರು ರೆಡ್ಡಿ ಪಕ್ಷ ಸೇರಲಿದ್ದಾರೆ.

ರಾಮನಗರದಲ್ಲಿ ರಾಮಮಂದಿರ್, ಕಾಂಗ್ರೆಸ್‌ಗೆ ಗುಡ್ ಬೈ ಹೇಳ್ತಾರ ಜಮೀರ್?

Related Video