ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ: ಪತ್ನಿ, ಪುತ್ರಿ ಬ್ರಹ್ಮಿಣಿ ಜತೆ ರೋಡ್‌ ಶೋ

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ  ಭರ್ಜರಿ ಪ್ರಚಾರ
ಪತ್ನಿ ಅರುಣಾ ಲಕ್ಷ್ಮಿ, ಪುತ್ರಿ ಬ್ರಹ್ಮಿಣಿ ಜೊತೆ ರೋಡ್ ಶೋ
ಮೆರವಣಿಗೆಯಲ್ಲಿ ಸಾವಿರಾರು ಬೆಂಬಲಿಗರು ಭಾಗಿ

First Published May 5, 2023, 5:36 PM IST | Last Updated May 5, 2023, 5:36 PM IST

ಕೊಪ್ಪಳ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಮಾಜಿ ಸಚಿವ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಲ್ಲಿ  ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅವರು ಕೆಆರ್‌ಪಿಪಿ ಪಕ್ಷದಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.  ಪತ್ನಿ ಅರುಣಾ ಲಕ್ಷ್ಮಿ ಹಾಗೂ ಪುತ್ರಿ ಬ್ರಹ್ಮಣಿ ರೆಡ್ಡಿ ಜೊತೆ ರೋಡ್‌ ಶೋ ನಡೆಸಿದರು. ಮೆರವಣಿಗೆ ವೇಳೆ ಸಾವಿರಾರು ಬೆಂಬಲಿಗರು ಪಾಲ್ಗೊಳ್ಳುವ ಮೂಲಕ ಜನಾರ್ದನ ರೆಡ್ಡಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ , ಜನ ನನಗೆ ಆಶೀರ್ವಾದ ಮಾಡಲಿದ್ದಾರೆ. ನಾನು ಗೆದ್ದೆ ಗೆಲ್ಲುತ್ತೇನೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಆಯ್ತು. ಬೃಹತ್‌ ರ್ಯಾಲಿ ಮತ್ತು ರೋಡ್ ಶೋ ಮಾಡುವುದು ಬಾಕಿ ಇದೆ. ಜನ ನನ್ನನ್ನು ದೊಡ್ಡ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸ ನನಗೆ ಇದೆ ಎಂದು ಜನಾರ್ದನ ರೆಡ್ಡಿ ಹೇಳಿದರು.
 

Video Top Stories