ಶೆಟ್ಟರ್‌ಗೆ ತಪ್ಪಿದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಟಿಕೆಟ್‌,ಬಿಜೆಪಿ ವಿರುದ್ಧ ಪತ್ನಿ ಶಿಲ್ಪಾ ಶೆಟ್ಟರ್‌ ಆಕ್ರೋಶ

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್, ಬೆಂಗಳೂರಿನಿಂದ ಹುಬ್ಬಳ್ಳಿಯ ನಿವಾಸಕ್ಕೆ ವಾಪಸ್ಸಾದರು. ಈ ವೇಳೆಪತ್ನಿ ಶಿಲ್ಪಾ ಶೆಟ್ಟರ್ ಭಾವುಕರಾಗಿ  ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು 

First Published Apr 18, 2023, 10:10 AM IST | Last Updated Apr 18, 2023, 10:11 AM IST

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್, ಬೆಂಗಳೂರಿನಿಂದ ಹುಬ್ಬಳ್ಳಿಯ ನಿವಾಸಕ್ಕೆ ವಾಪಸ್ಸಾದರು. ಈ ವೇಳೆಪತ್ನಿ ಶಿಲ್ಪಾ ಶೆಟ್ಟರ್ ಭಾವುಕರಾದರು. ಸುವರ್ಣ ನ್ಯೂಸ್ ಜತೆ ಮಾತನಾಡಿದ ಅವರು  ಬಿಜೆಪಿ ಎನ್ನುವ  ಖಾಲಿ ಜಾಗದಲ್ಲಿ ಮನೆ ಕಟ್ಟೋ ಕೆಲಸ  ಶೆಟ್ಟರ್ ಮಾಡಿದ್ರು. ಇಟ್ಟಿಗೆಯನ್ನು‌ ಜೋಡಿಸಿ ಮನೆ ಕಟ್ಟಿದರು. ಆದ್ರೆ ಇದೀಗ ಆ ಮನೆಯಿಂದ್ಲೇ ಹೊರ ಹೋಗುವಂತೆ  ಬಿಜೆಪಿಯಲ್ಲಿನ ಕೆಲವರು ಮಾಡಿದ್ದಾರೆ ಎಂದು  ಆರೋಪಿಸಿದ್ರು. ಟಿಕೇಟ್ ಕೊಟ್ಟು ಆರು ತಿಂಗಳು ಶಾಸಕರಾಗಲು ಬಿಡಿ ಅಂದ್ರು. ಆದ್ರೆ ಅದಕ್ಕೂ ಬಿಜೆಪಿಯಲ್ಲಿ ಅವಕಾಶ ನೀಡಲಿಲ್ಲ ಅಂತ ಶಿಲ್ಪಾ ಶೆಟ್ಟರ್ ನೋವು ತೋಡಿಕೊಂಡರು.

Video Top Stories