Jagadish Shettar: ಕೈಗೆ ಶೆಟ್ಟರ್ ಶಾಕ್.. ಕನ್ಫರ್ಮ್ ಆಯ್ತಾ ಬೆಳಗಾವಿ ಲೋಕಸಭೆ ಟಿಕೆಟ್..?
ಸ್ವಾಭಿಮಾನಕ್ಕೆ ಧಕ್ಕೆಯಾಗಿ ಬಿಜೆಪಿ ತೊರೆದಿದ್ದ ಶೆಟ್ಟರ್ ಮರಳಿ ಗೂಡಿಗೆ..!
9 ತಿಂಗಳಲ್ಲಿ ಬದಲಾಯ್ತು ವರಸೆ.. ದೆಹಲಿಯಲ್ಲಿ ಕಮಲ ಹಿಡಿದ ಶೆಟ್ಟರ್..!
ಅಮಿತ್ ಶಾ ಭೇಟಿ..20 ನಿಮಿಷಗಳ ಮಾತುಕತೆ..ಬಿಜೆಪಿಗೆ ಶೆಟ್ಟರ್ ವಾಪಸ್..!
284 ದಿನಗಳ ಹಿಂದೆ ಬಿಜೆಪಿ ವಿರುದ್ಧ ಭುಸುಗುಟ್ಟಿ ಕಾಂಗ್ರೆಸ್(Congress) ಸೇರಿದ್ದ ಶೆಟ್ಟರ್. ಬಿಜೆಪಿಯಲ್ಲಿ ಅವಮಾನವಾಯ್ತು, ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಅಂತ ಅಬ್ಬರಿಸಿ ಕೈ ಪಾಳೆಯಕ್ಕೆ ಲಾಂಗ್ ಜಂಪ್ ಮಾಡಿದ್ರು. ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಪಕ್ಷಾಂತರಕ್ಕೆ ವರ್ಷ ತುಂಬುವ ಮೊದಲೇ ಶೆಟ್ಟರ್(Jagadish Shettar) ಮತ್ತೆ ಸುನಾಮಿ ಎಬ್ಬಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾದ 284 ದಿನಗಳ ನಂತರ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ(BS Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ(B.Y. Vijayendra) ಜೊತೆ, ದೆಹಲಿಯಲ್ಲಿ ಬಿಜೆಪಿ(BJP) ವರಿಷ್ಠರನ್ನು ಭೇಟಿಯಾದ ಶೆಟ್ಟರ್, ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗ್ಬಹ್ದು ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ಸಂದರ್ಭ. ಬಿಜೆಪಿ ಟಿಕೆಟ್ ಕೊಡ್ಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕಾಗಿ, ಕೇಸರಿ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದವರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್. ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಹೀಗಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ ಅಂದಿದ್ರು ಶೆಟ್ಟರ್. ಇದೀಗ ಅದೇ ಶೆಟ್ಟರ್, ಕಾಂಗ್ರೆಸ್‌ಗೆ ಕೈ ಕೊಟ್ಟು ಮರಳಿ ಗೂಡು ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಕಾಂಗ್ರೆಸ್'ನ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮತ್ತೆ ಬಿಜೆಪಿಗೆ ಜೈ ಅಂದಿದ್ದಾರೆ.
ಇದನ್ನೂ ವೀಕ್ಷಿಸಿ: ಬಂಡಾಯದ ಬಾವುಟ ಬೀಸಿದ ದಂಡನಾಯಕರು! ಅಂತರ್ಯುದ್ಧಕ್ಕೆ ಛಿದ್ರವಾಗುತ್ತಾ ಘಟಬಂಧನ್..?