ಬಂಡಾಯದ ಬಾವುಟ ಬೀಸಿದ ದಂಡನಾಯಕರು! ಅಂತರ್ಯುದ್ಧಕ್ಕೆ ಛಿದ್ರವಾಗುತ್ತಾ ಘಟಬಂಧನ್..?

ಹಸ್ತಪಾಳಯಕ್ಕೆ ಶಾಕ್ ಮೇಲೆ ಶಾಕ್! ಏನು ಕಾರಣ..?
ಮೈತ್ರಿ ಪಾಳಯದಲ್ಲಿ ಶುರುವಾಯ್ತಾ ಅಂತರ್ಯುದ್ಧ!
ಮೈತ್ರಿಗೆ ಶ್ರೀಕಾರ ಸುತ್ತಿದವರೇ ಗುಡ್ ಬೈ ಹೇಳಿದರಾ?
 

Share this Video
  • FB
  • Linkdin
  • Whatsapp

ಆ ಕಡೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್(Congress) ಜೋಡೊ ಯಾತ್ರೆ ನಡೆಸ್ತಾ ಇದೆ. ಆದ್ರೆ ಈ ಕಡೆ, ಮೈತ್ರಿ ಕೂಟದಲ್ಲಿದ್ದ ಒಂದೊಂದೇ ಪಕ್ಷಗಳು ಛೋಡೋ ಜಾತ್ರೆನೇ ಮಾಡ್ತಿದಾವೆ. ಬಂಗಾಳದ ದೀದಿ.. ಪಂಜಾಬ್‌ನಲ್ಲಿ ಕೇಜ್ರಿವಾಲ್ ಶಾಕ್ ಕೊಟ್ಟ ಬೆನ್ನಲ್ಲೇ ಈಗ ನಿತೀಶ್ ಕುಮಾರ್(Nitish kumar) ಕೂಡ ಬಿಗ್ ಶಾಕ್ ಕೊಟ್ಟಿದಾರೆ. ಲೋಕಸಂಗ್ರಾಮ ಹತ್ತಿರ ಬರ್ತಾ ಇದೆ. ಆ ಸಂಗ್ರಾಮ ಸಮೀಪವಾದಂತೆಲ್ಲಾ ರಣೋತ್ಸಾಹ ಹೆಚ್ಚಾಗ್ತಾ ಇದೆ. ಒಂದು ಕಡೆ, ಶತಾಯಗತಾಯ ಮೋದಿಯನ್ನ(Narendra Modi) ಮಣಿಸಲೇಬೇಕು, ಮೋದಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲೇಬೇಕು ಅಂತ ತವಕಿಸುತ್ತಿರೋ, ಹಸ್ತಪಾಳಯ. ಇಷ್ಟು ಸಾಲದು ಅಂತ, ಮೋದಿ ಅವರ ಗೆಲುವಿನ ಅಶ್ವಮೇಧ ಕಟ್ಟಿಹಾಕೋದಕ್ಕೆ ಅಂತಲೇ, ಅವತ್ತು 27 ಪಕ್ಷಗಳು ಒಟ್ಟಾಗಿದ್ವು. ಮೋದಿ ವಿರುದ್ಧ ಸಮರಘೋಷದ ವೀರ ದುಂದುಭಿ ಮೊಳಗಿಸಿದ್ವು. ಈಗ ಅದೇ ಮೈತ್ರಿ ಕೂಟದಲ್ಲಿ ದೊಡ್ಡದೊಂದು ಬಿರುಕು ಕಾಣಿಸಿಕೊಂಡಿದೆ. ಮೋದಿ ಅವರನ್ನ ಮಣಿಸಬೇಕು ಅನ್ನೋ ಒಂದೇ ಒಂದು ಉದ್ದೇಶದಿಂದ, ಅದೊಂದೇ ಧ್ಯೇಯದಿಂದ, ಕೈಪಾಳಯದ ಜೊತೆ ಕೈಕೈ ಹಿಡಿದು ನಿಂತಿದ್ದೋರು, ಇವತ್ತು ಒಬ್ಬೊಬ್ಬರಾಗಿ ದೂರವಾಗ್ತಿದಾರೆ.

ಇದನ್ನೂ ವೀಕ್ಷಿಸಿ: CRPF, BSF ಮಹಿಳಾ ಪಡೆಯಿಂದ ಸ್ತ್ರೀ ಶಕ್ತಿ ಅನಾವರಣ: 260 ಸಾಹಸಿಗಳಿಂದ ಬೈಕ್‌ ಮೇಲೆ ಡೇರ್‌ಡೆವಿಲ್‌ ಸ್ಟಂಟ್ಸ್‌

Related Video