Kumaraswamy: ಮಂಡ್ಯ ಜನರಿಗೆ ನ್ಯಾಯ ಒದಗಿಸಲು ಎಂಪಿ ಚುನಾವಣೆಗೆ ಬಂದಿರೋದು: ಹೆಚ್.ಡಿ.ಕುಮಾರಸ್ವಾಮಿ
ಮಂಡ್ಯ ಜಿಲ್ಲೆಗೆ ಹೊಸ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್
ಮೇಕೆದಾಟು ಅಸ್ತ್ರ ಪ್ರಯೋಗಿಸಿ ಕುಮಾರಸ್ವಾಮಿ ಮತಯಾಚನೆ
ಕಾವೇರಿ ನಾಡಲ್ಲಿ ಭಾವನಾತ್ಮಕ ವಿಚಾರ ಮುಂದಿಟ್ಟ ಹೆಚ್‌ಡಿಕೆ
ಮಂಡ್ಯ ಲೋಕಸಭಾ ಅಖಾಡ ಮತ್ತಷ್ಟು ರಂಗೇರಿದ್ದು, ಒಂದು ಕಡೆ ಹೆಚ್‌ಡಿಕೆ ವಿರುದ್ಧ ಕೈ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರಿಗೆ ಹೆಚ್‌ಡಿಕೆಗೆ(HD Kumaraswamy) ಟಕ್ಕರ್ ಕೊಟ್ಟಿದ್ದಾರೆ. ಮಂಡ್ಯ(Mandya) ಜಿಲ್ಲೆಗೆ ಹೊಸ ಪ್ರಣಾಳಿಕೆಯನ್ನು(Manifesto) ಕಾಂಗ್ರೆಸ್(Congress) ಬಿಡುಗಡೆ ಮಾಡಿದೆ. ಕಾಂಗ್ರೆಸ್‌ಗೆ ಕಾವೇರಿ(Cauvery) ಮೂಲಕ ಹೆಚ್‌ಡಿಕೆ ಟಕ್ಕರ್ ಕೊಟ್ಟಿದ್ದಾರೆ. ಮೇಕೆದಾಟು (Mekedatu) ಅಸ್ತ್ರ ಪ್ರಯೋಗಿಸಿ ಹೆಚ್‌ಡಿಕೆ ಮತಯಾಚನೆ ಮಾಡ್ತಿದ್ದಾರೆ. ಕಾವೇರಿ ವಿಚಾರದಲ್ಲಿ ನ್ಯಾಯ ಒದಗಿಸದಿದ್ದರೇ ಮುಂದೆ ಮತಕೇಳಲ್ಲ. 5 ವರ್ಷದಲ್ಲಿ ಮೇಕೆದಾಟಿಗೆ ಶಂಕುಸ್ಥಾಪನೆ ಮಾಡದಿದ್ದರೇ ರಾಜಕೀಯ ನಿವೃತ್ತಿ. ಕಾವೇರಿ ನಾಡಲ್ಲಿ ಭಾವನಾತ್ಮಕ ವಿಚಾರ ಮುಂದಿಟ್ಟ ಹೆಚ್‌ಡಿಕೆ ಮತಯಾಚಿಸುತ್ತಿದ್ದಾರೆ. ಪ್ರತಿ ಸಮಾವೇಶದಲ್ಲಿ ಕಾವೇರಿ, ಮೇಕೆದಾಟು ಪ್ರಸ್ತಾಪವನ್ನು ಕುಮಾರಸ್ವಾಮಿ ಮಾಡ್ತಿದ್ದಾರೆ. ಕಾಂಗ್ರೆಸ್‌ನವರು ಮಂಡ್ಯ ಜಿಲ್ಲೆ ರೈತರು ಬೆಳೆ ಬೆಳೆಯಬೇಡಿ ಎನ್ನುತ್ತಿದ್ದಾರೆ. ಹಿಂದೆ ಡ್ಯಾಂನಲ್ಲಿ 80 ಅಡಿ ನೀರಿದ್ದಾಗಲೂ ರೈತರಿಗೆ ನೀರು ಕೊಡಲಾಗಿದೆ. ಭತ್ತ ಬೆಳೆಯುವ ಮಂಡ್ಯ ಜನರಿಗೆ ಹುರುಳಿ ಬೆಳೆಯಿರಿ ಅಂತಿದ್ದಾರೆ. ಮಂಡ್ಯ ಜಿಲ್ಲೆ ಜನರಿಗೆ ನ್ಯಾಯ ಒದಗಿಸಲು ಎಂಪಿ ಚುನಾವಣೆಗೆ ಬಂದಿರೋದು. ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ನ್ಯಾಯಕೊಡಿಸುವುದೇ ನನ್ನ ಗುರಿ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: Ramayana Movie: ಬಿಟೌನ್ ರಾಮಾಯಣದ ಬಗ್ಗೆ ಸಿಕ್ತು ಮತ್ತೊಂದು ಬಿಗ್ ನ್ಯೂಸ್..! ಹೀರೋ ರಣ್ಬೀರ್ ಅಲ್ಲವೇ ಅಲ್ಲ, ಮತ್ಯಾರು ?