Asianet Suvarna News Asianet Suvarna News

Karnataka Budget 2023-24: ವಾಣಿಜ್ಯ, ಅಬಕಾರಿ ಶುಲ್ಕ, ಆಸ್ತಿ, ವೃತ್ತಿಪರ ತೆರಿಗೆ ಹೆಚ್ಚಳ ಸಾಧ್ಯತೆ ?

ಸಿಎಂ ಸಿದ್ದರಾಮಯ್ಯ ಇಂದು ತಮ್ಮ 14ನೇ ಬಜೆಟ್‌ ಮಂಡಿಸಲಿದ್ದಾರೆ. ಗ್ಯಾರಂಟಿಗಳ ನಡುವೆ ಬಜೆಟ್ ಸಿದ್ಧಪಡಿಸುವುದು ಸಿಎಂ ಸಿದ್ದರಾಮ್ಯಯ ಅವರಿಗೆ ಸವಾಲಿನ ಕಾರ್ಯವಾಗಿದೆ.

ಇಂದು ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಅವರ 14ನೇ ಬಜೆಟ್‌ ಇದಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ 7ನೇ ಬಾರಿಗೆ ಬಜೆಟ್ (Budget)​ ಮಂಡನೆ ಮಾಡುತ್ತಿದ್ದಾರೆ. ಹೊಸ ಸರ್ಕಾರದ ಬಗ್ಗೆ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದ್ದು, ಈ ಬಾರಿಯ ಬಜೆಟ್‌ ಗಾತ್ರ 3.35 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ. ಮಧ್ಯಾಹ್ನ 12 ಗಂಟೆಗೆ ಸಿಎಂ ಬಜೆಟ್‌ ಮಂಡಿಸಲಿದ್ದಾರೆ. ಸಿಎಂ ಕೆಲವು ತೆರಿಗೆಗಳನ್ನು ( taxes) ಹೆಚ್ಚಳ ಮಾಡುವ ಸಾಧ್ಯತೆ ಇದೆ. ಜೊತೆಗೆ ಹಲವು ಇಲಾಖೆಗಳ ಅನುದಾನವನ್ನು ಕಡಿತ ಮಾಡುವ ಸಾಧ್ಯತೆ. ಶಾಸಕರ ಅಭಿವೃದ್ಧಿಗೆ ಹೆಚ್ಚಿನ ನೆರವು ಸಿಗುವುದು ಡೌಟು ಎನ್ನಲಾಗ್ತಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಸಿಎಂ ಮುಂದಾಗಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸಿಎಂ ಈ ಬಾರಿ ದಾಖಲೆಯ ಬಜೆಟ್‌ ಮಂಡಿಸಲಿದ್ದಾರೆ.

ಇದನ್ನೂ ವೀಕ್ಷಿಸಿ:  ಸದನದ ಗೌರವಕ್ಕೆ ಧಕ್ಕೆ ತಂದಿತಾ ಬಿಜೆಪಿ ಹೈಕಮಾಂಡ್‌ ನಿರ್ಧಾರ ?: ವಿಪಕ್ಷ ನಾಯಕನಿಲ್ಲದೇ ಬಜೆಟ್‌ ಮಂಡನೆ ?

Video Top Stories