ಹೈಕಮಾಂಡ್‌ ಸಿಎಂ ಆಗು ಅಂದ್ರೆ ನಾನು ಸಿದ್ಧನಿದ್ದೇನೆ: ಡಾ.ಜಿ. ಪರಮೇಶ್ವರ್‌

ಹೈಕಮಾಂಡ್‌ ಸಿಎಂ ಆಗು ಎಂದರೇ ನಾನು ಸಿದ್ಧನಿದ್ದೇನೆ. ನಾನು ಕೂಡ 50 ಶಾಸಕರನ್ನು ಕರೆದುಕೊಂಡು ಹೋಗಿ ಕೂಗಾಡಬಹುದು. ಆದ್ರೆ ನಾನು ಹಾಗೆ ಮಾಡುವುದಿಲ್ಲ ಎಂದು ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ನನಗೆ ಹೈಕಮಾಂಡ್‌ ಸಿಎಂ ಆಗು ಎಂದ್ರೆ ನಾನು ಸಿದ್ಧನಿದ್ದೇನೆ. ನಾನು ಸಹ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ನಾನು ಲಾಭಿ ಮಾಡುವ ಅವಶ್ಯಕತೆ ಇಲ್ಲ. ನಾನು 50 ಶಾಸಕರನ್ನು ಕಟ್ಟಿಕೊಂಡು ಕೂಗಾಡುವುದನ್ನು ಮಾಡಬಹುದು. ಆದ್ರೆ ನನಗೆ ಪಕ್ಷದ ಶಿಸ್ತು ಮುಖ್ಯ .ಹೈಕಮಾಂಡ್‌ಗೆ ನನ್ನ ಬಗ್ಗೆ ಎಲ್ಲಾ ಗೊತ್ತಿದೆ ಎಂದು ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಸಿಎಂ ಆಯ್ಕೆ ಬಗ್ಗೆ ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕುಳಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪರಮೇಶ್ವರ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಚುನಾವಣೆಗೂ ಮುಂಚೆ ಒಗ್ಗಟ್ಟು.. ಈಗ ಪಟ್ಟಕ್ಕಾಗಿ ಬಿಕ್ಕಟ್ಟು : ಯಾರಿಗೆ ಪಟ್ಟಾಭಿಷೇಕ ?

Related Video