ಹಿಂದೂಗಳು ಶಾಲೆಗೆ ಬರೋದಕ್ಕೂ ಭಯದ ವಾತವರಣ ಸೃಷ್ಟಿ, ಸಿಎಂ ಸಿದ್ದು ವಿರುದ್ಧ ಬಿಜೆಪಿ ವಾಗ್ದಾಳಿ!

ಉಡುಪಿ ಕಾಲೇಜಿನ ಟಾಯ್ಲೆಟ್‌ನಲ್ಲಿ ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ ಪ್ರಕರಣ ಇದೀಗ ರಾಜ್ಯದಲ್ಲಿ ಭಾರಿ ಪ್ರತಿಭಟನೆಗೆ ಕಾರಣಾಗಿದೆ. ಆದರೆ ಸರ್ಕಾರ ಈ ಪ್ರಕರಣ ಬೆಳಕಿಗೆ ತಂದವರ ಮನೆಗೆ ದಾಳಿ ನಡೆಸುತ್ತಿದೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ. ಈ ಘಟನೆಯಿಂದ ಹಿಂದೂ ಹೆಣ್ಣು ಮಕ್ಕಳು ಶಾಲೆಗೆ ಬರಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ. 

First Published Jul 28, 2023, 5:42 PM IST | Last Updated Jul 28, 2023, 5:42 PM IST

ಬೆಂಗಳೂರು(ಜು.28) ಉಡುಪಿ ವಿಡಿಯೋ ಪ್ರಕರಣ ಹಾಗೂ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯಿಂದ ಹಿಂದೂ ಹೆಣ್ಣುಮಕ್ಕಳು ಶಾಲೆಗೆ ಬರುಲು ಭಯಪಡುವಂತ ವಾತಾವರಣ ನಿರ್ಮಾಣವಾಗಿದೆ ಎಂದು ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ. ವಿಡಿಯೋ ಮಾಡಿದ್ದು ತಮಾಷೆಗಾಗಿ ಎಂದಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದವರು ಸಿದ್ದರಾಮಯ್ಯ ಸರ್ಕಾರಕ್ಕೆ ಅಮಾಯಕರಂತೆ ಕಾಣುತ್ತಿದ್ದಾರೆ. ಸದನದಲ್ಲಿ ಯಾರು ಇಲ್ಲದೆ ಇರುವಾಗ ಭಾಷಣ ಮಾಡುವ ಸಿದ್ದಾರಮಯ್ಯಗೆ ಇದೀಗ ಉಡುಪಿ ಪ್ರಕರಣ ತನಿಖೆ ಮಾಡಿಸುವ ಧಮ್ಮು ತಾಕತ್ತು ಇಲ್ಲವೇ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.