ಯುವಕನಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮ ಎಂದ ಗೃಹ ಸಚಿವರು

ಯುವಕನಿಗೆ ಬೆಂಕಿ ಹಚ್ಚಿರುವ ಆರೋಪಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಪ್ರೀತಿಸಿದ ಕಾರಣಕ್ಕೆ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್(Petrol) ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ. ಆರ್.ಆರ್‌.ನಗರದ ನಿವಾಸಿ ರಂಗನಾಥ ಪುತ್ರನಾದ ಮನು(Manu) ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸುತಿದ್ದ.ಇದು ಇಷ್ಟವಿಲ್ಲದ ಯುವತಿ ಮನೆಯವರು ಆತನನ್ನು ಕಿಡ್ನ್ಯಾಪ್‌(Kidnap) ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌(Dr. G Parameshwar) ಮಾತನಾಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತರಿಸಿಕೊಳ್ಳುತ್ತೇನೆ ಎಂದು ಗೃಹ ಸಚಿವರು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಬಗೆದಷ್ಟು ಬಯಲಾಗ್ತಿದೆ ನಿಶಾ ನರಸಪ್ಪ ವಂಚನೆ: ವಂಶಿಕಾ ಹೆಸರಲ್ಲಿ ಲಕ್ಷಾಂತರ ಹಣ ಪಂಗನಾಮ

Related Video