ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ: ಕಾಂಗ್ರೆಸ್ ವಿರುದ್ಧ ಸೂಲಿಬೆಲೆ ವಾಗ್ದಾಳಿ
ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಆಡಳಿತಕ್ಕೆ ಬಂದಿದೆ
ಸಾವರ್ಕರ್ ಕಾರ್ಯಕ್ರಮದ ಬಗ್ಗೆ ಸರ್ಕಾರಕ್ಕೆ ಭಯ
ಕಾಂಗ್ರೆಸ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ
ಮೈಸೂರು: ಜಿಲ್ಲೆಯಲ್ಲಿ ವೀರ್ ಸಾವರ್ಕರ್ ಅವರ 140ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದಿನ ಕಾರ್ಯಕ್ರಮ ಇಲ್ಲ, ರದ್ದಾಗಲಿದೆ ಎಂದು ನಾವು ತಿಳಿದಿದ್ದೆವು. ಇದಕ್ಕೆ ಹಲವರು ಕಾರಣಗಳು ಇವೆ. ಸಾಹಿತಿ ಎಸ್.ಎಲ್ ಬೈರಪ್ಪ, ನಾನು ಇದ್ದೇವೆ ಎಂದು ರದ್ದು ಪಡಿಸುವ ಕೆಲಸವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಸಾವರ್ಕರ್ ಕಾರ್ಯಕ್ರಮದ ಬಗ್ಗೆ ಸರ್ಕಾರಕ್ಕೆ ಭಯ ಇರಬಹುದು. ಅಧಿಕಾರಕ್ಕೆ ಬಂದು ಒಂದು ವಾರವಾಗಿಲ್ಲ ಅಷ್ಟರಲ್ಲಿ ಸಾವರ್ಕರ್ ಜಯಂತಿ ರದ್ದು ಮಾಡಲು ಹೊರಟಿದ್ದಾರೆ. ಇದು ಹಿಟ್ಲರ್ ಸರ್ಕಾರ. ಸಾವರ್ಕರ್ ಇವತ್ತಿಗೂ ಪ್ರಸ್ತುತ ಹಾಗೂ ಜೀವಂತ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ವೀಕ್ಷಿಸಿ: ಮಳೆಗಾಲದಲ್ಲಿ ಈ ರಸ್ತೆಗಳು ಡೇಂಜರ್.. ಡೇಂಜರ್: 65 ಸ್ಥಳಗಳಲ್ಲಿ ಭಾರೀ ನೀರು, ಟ್ರಾಫಿಕ್ ಪೊಲೀಸರ ಮಾಹಿತಿ