ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಉತ್ತರ ನೀಡದ ಹೈಕಮಾಂಡ್‌: ಎಲೆಕ್ಷನ್ ಟೈಮಲ್ಲಿ ಇದು ಅಸಾಧ್ಯ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಮುಗಿಸಿ ಬಂದರೂ ಕೂಡ ಸಂಪುಟ ವಿಸ್ತರಣೆ ಸಸ್ಪೆನ್ಸ್‌ ಆಗಿ ಉಳಿದಿದೆ.
 

Share this Video
  • FB
  • Linkdin
  • Whatsapp

ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಿಂದ ವಾಪಾಸ್ ಬಂದಿದ್ದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮುನ್ಸೂಚನೆ ಸಿಗುತ್ತಿಲ್ಲ. ಮತ್ತೆ ಸಚಿವ ಸಂಪುಟ ವಿಸ್ತರಣೆ ನೆನೆಗುದಿಗೆ ಬಿತ್ತಾ ಎಂಬ ಪ್ರಶ್ನೆ ಮೂಡಿದ್ದು, ಸಂಪುಟ ಸೂತ್ರಕ್ಕೆ ಹೈಕಮಾಂಡ್‌ ಲೆಕ್ಕಾಚಾರವೇನು ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿಲ್ಲ. ಎರಡು ದಿನಗಳ ಕಾಲ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ, ಸಂಪುಟ ವಿಸ್ತರಣೆಯ ಬಗ್ಗೆ ಬಿಜೆಪಿ ನಾಯಕರು ಸ್ಪಷ್ಟ ಉತ್ತರ ನೀಡಿಲ್ಲ. ಸಮಯ ಅಭಾವದಿಂದ ಸಂಪುಟ ವಿಸ್ತರಣೆ ಚರ್ಚೆ ಆಗಿಲ್ಲ. ಚುನಾವಣೆಗೆ ಕೇವಲ ಮೂರು ತಿಂಗಳು ಮಾತ್ರ ಬಾಕಿ ಇದೆ, ಈ ವೇಳೆ ವಿಸ್ತರಣೆ ಅಗತ್ಯವಿಲ್ಲ ಎಂದು ನಾಯಕರ ಅಭಿಪ್ರಾಯವಿದೆ ಎನ್ನಲಾಗಿದೆ ‌ ಸಧ್ಯ ವಿಧಾನಸಭಾ ಚುನಾವಣೆ ತಯಾರಿಯಲ್ಲಿ ರಾಜ್ಯ ಬಿಜೆಪಿ ಪಡೆ ಸಜ್ಜಾಗಿದೆ.

Related Video