Asianet Suvarna News Asianet Suvarna News

ನಾನು ಹಾಗೂ ಹೆಚ್.ಡಿ.ಕೆ ಜೀವ ಇರುವವರೆಗೂ ಹೊಡೆದಾಡಲ್ಲ: ಹೆಚ್.ಡಿ ರೇವಣ್ಣ ಖಡಕ್ ಮಾತು

ನಾನು ಹಾಗೂ ಕುಮಾರಸ್ವಾಮಿ ಜೀವ ಇರುವವರೆಗೂ ಹೊಡೆದಾಡಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಖಡಕ್ ಆಗಿ ಟಾಂಗ್ ಕೊಟ್ಟಿದ್ದಾರೆ.
 

ಹಾಸನ ಜೆಡಿಎಸ್ ಟಿಕೆಟ್ ಫೈಟ್ ವಿಚಾರದಲ್ಲಿ ಹೆಚ್.ಡಿ ರೇವಣ್ಣ ಎಂಟ್ರಿ ಆಗಿದ್ದು, ಹೆಚ್.ಡಿ.ಕೆ ಹಾಗೂ ರೇವಣ್ಣ ಹೊಡೆದಾಡ್ತಾರೆ ಅಂದುಕೊಂಡ್ರೆ ಅದು ಮೂರ್ಖನತ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹತ್ತು ವರ್ಷದಿಂದ ಆಸ್ಪತ್ರೆ ನೆನಗುದಿಗೆ ಬಿದ್ದಿತ್ತು. ರೇವಣ್ಣ ಆಸ್ಪತ್ರೆಗೆ ಕೋಟ್ಯಾಂತರ ರೂಪಾಯಿ ಕೊಟ್ಟಿದ್ದು, ಕುಮಾರಸ್ವಾಮಿ ಹಗಲು ರಾತ್ರಿ ಎನ್ನದೇ ಪಕ್ಷಕ್ಕೆ ಹೋರಾಟ ಮಾಡುತ್ತಿದ್ದಾನೆ ಎಂದರು. ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿ ಹೋರಾಡುತ್ತಿದ್ದಾನೆ ಎನ್ನುವ ಮೂಲಕ ಹಾಸನ ಜೆಡಿಎಸ್‌ ಟಿಕೆಟ್‌ ಲಡಾಯಿಗೆ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ.

Video Top Stories