ಜೆಡಿಎಸ್ ಮುಳುಗಿ ಹೋಗಿದೆ ಎಂಬ ಭ್ರಮೆಯಲ್ಲಿದ್ದಾರೆ: ಮಹಾಘಟಬಂಧನ್‌ ಸಭೆಗೆ ಹೆಚ್‌ಡಿಕೆ ಟಾಂಗ್‌

ಜೆಡಿಎಸ್‌ ಮುಳುಗಿ ಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ. ನಮ್ಮ ಪಕ್ಷವನ್ನ ಪಾಪ ಅವರು ಲೆಕ್ಕಕ್ಕೇ ಇಟ್ಟಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ(opposition party) ನಡೆಯಲಿದೆ. ಈ ಸಭೆಯಲ್ಲಿ ಲೋಕಸಭಾ ಚುನಾವಣೆಗೆ(Loksabha election) ಬಿಜೆಪಿ(BJP) ಮಣಿಸಲು ಕುರಿತು ಚರ್ಚೆ ನಡೆಸಲಾಗುತ್ತದೆ. ಈ ಮಹಾಘಟಬಂಧನ್‌ ಸಭೆ (Mahaghatabandhan meeting) ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಟಾಂಗ್‌ ಕೊಟ್ಟಿದ್ದಾರೆ. ಇವರು ನಮ್ಮ ಪಕ್ಷವನ್ನು ಪಾಪ ಲೆಕ್ಕಕ್ಕೇ ಇಟ್ಟಿಲ್ಲ. ಜೆಡಿಎಸ್‌ ಮುಳುಗಿ ಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ಹೆಚ್‌ಡಿಕೆ ಟಾಂಗ್‌ ನೀಡಿದ್ದಾರೆ. ಯಾರೂ ಮಾಡದ ಸಾಧನೆ ಮಾಡಿದ್ದೇವೆ ಎಂದು ಬ್ಯಾನರ್‌ ಹಾಕಿದ್ದಾರೆ. ಒಂದು ಸಭೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಇವರಿಗೆ ಕಾಣುತ್ತಿಲ್ಲ. ಈ ರೈತರಿಗೆ ಸರ್ಕಾರ ಒಂದು ಸಂದೇಶವನ್ನು ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ: ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಕನಾ..? : ಹೆಚ್‌ಡಿಕೆಗೆ ಒಲಿಯುತ್ತಾ ವಿಪಕ್ಷ ನಾಯಕನ ಪಟ್ಟ..?

Related Video